ನವದೆಹಲಿ: 2016 ರ ಐಪಿಎಲ್ ಟೂರ್ನಿಯ ವೇಳೆ ನಡೆದ ಡ್ರಗ್ ಪರೀಕ್ಷೆಯಲ್ಲಿ ಪಾಸಿಟಿವ್ ಬರಲು ದೆಹಲಿ ಮಾಲಿನ್ಯವೇ ಕಾರಣ ಎಂದು ನ್ಯೂಜಿಲೆಂಡ್ ತಂಡದ ಮಾಜಿ ಆಟಗಾರ ಬ್ರೆಂಡನ್ ಮೆಕ್ಲಮ್ ಆರೋಪಿಸಿದ್ದಾರೆ.
ಖಾಸಗಿ ಮಾಧ್ಯಮವೊಂದರ ಸಂದರ್ಶನದ ವೇಳೆ ಮೆಕ್ಲಮ್, ಟೂರ್ನಿಯ ವೇಳೆ ತಾನು ಅಸ್ತಮಾ ಹಾಗೂ ಗಂಟಲು ಸಮಸ್ಯೆಯಿಂದ ಬಳಲಿದ್ದೆ. ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಔಷಧಿಯ ಪ್ರಮಾಣವನ್ನು ಹೆಚ್ಚಿಸಲಾಯಿತು. ಅದ್ದರಿಂದ ಡೋಪಿಂಗ್ ವರದಿಯಲ್ಲಿ ಪಾಸಿಟಿವ್ ಬಂದಿತ್ತು ಎಂದು ತಿಳಿಸಿದ್ದಾರೆ.
Advertisement
ಬಿಸಿಸಿಐ ಈ ವೇಳೆ ತಮ್ಮನ್ನು ಸಂಪರ್ಕಿಸಿ ವಿವರಣೆ ಕೇಳಿದ್ದು, ತಮ್ಮ ಆರೋಗ್ಯದ ಕುರಿತು ವಿವರಣ ಸ್ಪಷ್ಟನೆ ನೀಡಲು ತಾವು ಸ್ವೀಡನ್ ನ ಪರಿಣಿತ ವೈದ್ಯರ ಸಹಾಯ ಪಡೆದು ವರದಿ ನೀಡಿದ್ದಾಗಿ ಹೇಳಿದ್ದಾರೆ.
Advertisement
ಡ್ರಗ್ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದ್ದನ್ನು ತಾನು ಫೇಲ್ ಎಂದು ಪರಿಗಣಿಸಲಿಲ್ಲ. ಆದರೆ ಈ ಕುರಿತು ಕೆಲ ಸ್ಪಷ್ಟೀಕರಣ ನೀಡಬೇಕಾಯಿತು. ಈ ಕುರಿತು ಎಲ್ಲಾ ರೀತಿಯ ರೂಮರ್ ಗಳನ್ನು ಸೂಕ್ತ ಸಾಕ್ಷ್ಯ ನೀಡಲಾಗದ ಕಾರಣ ಅಲ್ಲಗೆಳೆಯಲಾಯಿತು. ಇದು ಕೇವಲ ಒಂದು ಪ್ರಕ್ರಿಯೇ ಅಷ್ಟೇ. ಆದರೆ ಬಿಸಿಸಿಐನಂತಹ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸಿದ್ದು ಉತ್ತಮ ಅನುಭವ ಎಂದು ಹೇಳಿದ್ದಾರೆ.
Advertisement
2016 ರ ಟೂರ್ನಿಯಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ವಿರುದ್ಧ 36 ಬಾಲ್ ಗಳಲ್ಲಿ 60 ರನ್ ಸಿಡಿಸಿದ್ದರು. ಈ ಪಂದ್ಯದಲ್ಲಿ ಗುಜರಾತ್ ಲಯನ್ಸ್ 1 ರನ್ ನಿಂದ ಜಯ ಗಳಿಸಿತ್ತು. ಪಂದ್ಯದ ಬಳಿಕ ಮೆಕ್ಲಮ್ ಅವರಿಗೆ ಡ್ರಗ್ ಪರೀಕ್ಷೆ ನಡೆಸಲಾಗಿತ್ತು. 2016ರ ಟೂರ್ನಿಯಲ್ಲಿ ಗುಜರಾತ್ ಲಯನ್ಸ್ ಪರ ಮೆಕ್ಲಮ್ ಆಡಿದ್ದರು.