ಬೆಂಗಳೂರು: ದಕ್ಷಿಣ ಭಾರತ ರಾಜ್ಯಗಳ ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ರಾಜ್ಯಸಭೆಯ ಸಂಸದರೊಬ್ಬರ ಮೇಲೆ ಗರಂ ಆಗಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಹೌದು, ದಕ್ಷಿಣ ಭಾರತದಲ್ಲಿ ಪಕ್ಷ ಬಲವರ್ಧನೆಯ ವಿಚಾರವಾಗಿ ಇಂದು ದೆಹಲಿಯ ಲೋಕಮಾನ್ಯ ತಿಲಕ್ ರಸ್ತೆಯಲ್ಲಿರುವ ನಿವಾಸದಲ್ಲಿ ಮೋದಿ ಬೆಳಗ್ಗೆ ಬಿಜೆಪಿ ಅಧಿಕಾರ ಇಲ್ಲದೇ ಇರುವ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾ ರಾಜ್ಯಗಳ ಸಂಸದರ ಸಭೆ ನಡೆಸಿದರು.
Advertisement
ಈ ಸಭೆಯಲ್ಲಿ ಕರ್ನಾಟಕದ ಸಂಸದರೊಬ್ಬರು ಭೂ ಕಾನೂನು ತಿದ್ದುಪಡಿ ವಿಚಾರದಲ್ಲಿ ಸಲಹೆ ನೀಡಿದರು. ಈ ಸಲಹೆಗೆ ಗರಂ ಆದ ಮೋದಿ ಸಂಸದರಿಗೆ ಟ್ರೆಂಡ್ ಪೊಲಿಟಿಕ್ಸ್ ಪಾಠವನ್ನು ಹೇಳಿಕೊಟ್ಟಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.
Advertisement
“70ರ ದಶಕದ ರಾಜಕಾರಣ ಬೇರೆ. ಈಗಿನ ರಾಜಕರಾಣದ ಸ್ಟೈಲೇ ಬೇರೆ. 70ರ ದಶಕದ ರಾಜಕಾರಣವನ್ನು ಬಿಟ್ಟುಬಿಡಿ. ಇನ್ನು ಏನಿದ್ದರೂ ಈಗಿನ ಟ್ರೆಂಡ್‍ಗೆ ಲಾಭವಾಗುವ ರಾಜಕಾರಣ ಮಾಡಿ. ಜನರಿಗೆ ಅನುಕೂಲ ಆಗಬೇಕು ಮತ್ತು ಅರ್ಥವಾಗಬೇಕು. ಆ ಕಾನೂನು ಜಾರಿಗೆ ತರುವುದು ನಮಗೆ ಗೊತ್ತಿದೆ. ನೀವು ಮೊದಲು ಜನರಿಗೆ ಹತ್ತಿರವಾಗುವ ರಾಜಕಾರಣ ಮಾಡಿ” ಎಂದು ಹೇಳಿ ಕ್ಲಾಸ್ ತೆಗೆದುಕೊಂಡಿದ್ದಾರೆ.
Advertisement
ಸಭೆಯಲ್ಲಿ ಮೋದಿ ಸಡನ್ ಆಗಿ ಗರಂ ಆಗಿದ್ದನ್ನು ನೋಡಿ ಸಂಸದರು ಕಕ್ಕಾಬಿಕ್ಕಿಯಾಗಿದ್ದರಂತೆ. ಮೋದಿಯ ಫುಲ್ ಕ್ಲಾಸ್ ಬಳಿಕ ಸಭೆ ಫುಲ್ ಸೈಲೆಂಟ್ ಆಗಿತ್ತು ಎಂದು ಮೂಲಗಳು ತಿಳಿಸಿವೆ.
Advertisement
ಇದನ್ನೂ ಓದಿ: ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ
ಸಭೆಯಲ್ಲಿ ಏನು ಚರ್ಚೆ ಆಗಿದೆ?
ಕೇಂದ್ರದ ಯೋಜನೆಗಳಿಗೆ ರಾಜ್ಯದವರು ಹೊಸ ಹೆಸರು ಇಟ್ಟು ತಮ್ಮ ಯೋಜನೆ ಎಂದು ಪ್ರಚಾರ ಮಾಡುತ್ತಿದ್ದು ಇದರ ಬಗ್ಗೆ ಗಮನಹರಿಸಿ. ರಾಜ್ಯ ಸರ್ಕಾರದ ಹೊಸ ಬೆಳಕು ಯೋಜನೆ ಕೇಂದ್ರದ ಯೋಜನೆಯಾಗಿದ್ದು ಇದನ್ನು ರಾಜ್ಯ ಸರ್ಕಾರ ತಮ್ಮದು ಎಂದು ಬಿಂಬಿಸುತ್ತಿದೆ. ಇಂತಹ ಅಂಶಗಳನ್ನು ನೀವು ಗಂಭೀರವಾಗಿ ಪರಿಗಣಿಸಬೇಕೆಂದು ಪ್ರಧಾನಿ ಮೋದಿ ಸಂಸದರಿಗೆ ಕಿವಿಮಾತು ಹೇಳಿದ್ದಾರೆ.
ಬಿಜೆಪಿ ಸರ್ಕಾರ ಇರದ ರಾಜ್ಯಗಳಲ್ಲಿ ಸಂಸದರೇ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳಬೇಕು. ಮುದ್ರಾ ಯೋಜನೆ, ಫಸಲ್ ಭೀಮಾ, ಉಜ್ವಲ ಯೋಜನೆ ಬಗ್ಗೆ ಪ್ರಚಾರ ಮಾಡಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ತಳ ಮಟ್ಟದ ಜನರಲ್ಲಿ ಜಾಗೃತಿ ಮೂಡಿಸಬೇಕು. ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಸಂಘಟನೆಗೆ ಆದ್ಯತೆ ನೀಡುಬೇಕು ಎಂದು ಸೂಚಿಸಿದ್ದಾರೆ.
ಇನ್ನೂ ಎರಡು ವರ್ಷದ ಅವಧಿ ಮಾತ್ರ ಇದೆ. ಸಮಯ ಎಷ್ಟು ಬೇಗ ಹೋಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಹೀಗಾಗಿ ಇವುಗಳನ್ನು ಅರಿತುಕೊಂಡು ಪಕ್ಷ ಸಂಘಟನೆಯ ಜೊತೆ ಅಭಿವೃದ್ಧಿ ಕಾರ್ಯವನ್ನು ಮಾಡಿ ಎಂದು ನಾಯಕರಿಗೆ ಮೋದಿ ಸೂಚಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಪ್ರಧಾನಿ ಮೋದಿ ಸಭೆಯಲ್ಲಿ ರಾಜ್ಯದ ಹಿತವನ್ನು ಮರೆತ ಬಿಜೆಪಿ ಸಂಸದರು