ಬೆಳಗಾವಿ: ಇದೇ ಮೊದಲ ಬಾರಿ ಬೆಳಗಾವಿಯಲ್ಲಿ (Belagavi) ಎಂಇಎಸ್ ಮಹಾಮೇಳಾವ್‌ಗೆ (MES Mahamelav) ಬ್ರೇಕ್ ಬಿದ್ದಿದೆ. ಇದರಿಂದ ಇಂಗು ತಿಂದ ಮಂಗನಂತಾದ ನಾಡದ್ರೋಹಿ ಎಂಇಎಸ್ (MES) ಪುಂಡರು ಸಾಮಾಜಿಕ ಜಾಲತಾಣಗಳಲ್ಲಿ ಕರ್ನಾಟಕ ಸರ್ಕಾರದ ವಿರುದ್ಧ ಅಪಪ್ರಚಾರ ನಡೆಸಿದ್ದಾರೆ.
ನಗರದ ವ್ಯಾಕ್ಸಿನ್ ಡಿಪೋ ಪೆಂಡಾಲ್ ಹಾಕಿ ಎಂಇಎಸ್ ಪುಂಡರು ಮಹಾಮೇಳಾವ್ ನಡೆಸಲು ಸಿದ್ಧತೆ ನಡೆಸಿದ್ದರು. ಆದರೆ ಪೊಲೀಸ್ ಇಲಾಖೆ ಮಹಾಮೇಳಾವ್ ನಡೆಸಲು ಅನುಮತಿ ನೀಡಲಿಲ್ಲ. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಎಂಇಎಸ್ ಕರ್ನಾಟಕ ಇಂದು ಪ್ರಜಾಪ್ರಭುತ್ವದ ಹತ್ಯೆ ಮಾಡಿದೆ. ಎಂಇಎಸ್‌ನ ಎಲ್ಲಾ ನಾಯಕರನ್ನು ಬಂಧಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ಕರ್ನಾಟಕ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.
ಪೆಂಡಾಲ್‌ಗಾಗಿ ತಂದಿದ್ದ ವಸ್ತುಗಳೆಲ್ಲ ಸೀಜ್:
ಇದಕ್ಕೂ ಮುನ್ನ ಎಂಇಎಸ್ ಮಹಾಮೇಳಾವ್ ನಡೆಸಲು ಉದ್ದೇಶಿಸಿದ ವೇದಿಕೆ ಸ್ಥಳಕ್ಕೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿದ್ದರು. ಈ ವೇಳೆ ಎಡಿಜಿಪಿ ಅಲೋಕ್ ಕುಮಾರ್, ಪೆಂಡಾಲ್ ಹಾಕುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಸಾವರ್ಕರ್ ಸೇರಿ 7 ಮಂದಿ ಫೋಟೋ ಅನಾವರಣ
ನಿಮಗೆಲ್ಲ ಯಾರು ಪೆಂಡಾಲ್ ಹಾಕಲು ಹೇಳಿದ್ದಾರೆ? ಎಲ್ಲಾ ವಸ್ತುಗಳನ್ನು ಸೀಜ್ ಮಾಡುತ್ತೇವೆ. ಟಿಳಕವಾಡಿ ಪೊಲೀಸ್ ಠಾಣೆ ಬಳಿ ವಸ್ತುಗಳು ಇರುತ್ತವೆ, ಸಂಜೆ ತಗೆದುಕೊಂಡು ಹೋಗಿ ಎಂದು ಪೆಂಡಾಲ್ ನಿರ್ಮಿಸುತ್ತಿದ್ದ ಸಿಬ್ಬಂದಿಗೆ ತಿಳಿಸಿದ್ದಾರೆ. ಪೆಂಡಾಲ್ ನಿರ್ಮಿಸಲು ಹೇಳಿದವರ ಬಗ್ಗೆ ಸ್ಟೇಟ್‌ಮೆಂಟ್ ತೆಗೆದುಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿನ ಇಂದಿರಾ ಕ್ಯಾಂಟೀನ್‍ಗಳ ಹೊಣೆಹೊತ್ತ BBMP ಆರೋಗ್ಯ ವಿಭಾಗ