ಮುಂಬೈ: ಮೃತ ಮಹಿಳೆಯ ಅಂಗಾಂಗದಿಂದ ಯೋಧರು ಸೇರಿ ಐವರ ಪ್ರಾಣ ಉಳಿಸಿದ ಸ್ಪೂರ್ತಿ ನೀಡುವ ಸುದ್ದಿಯೊಂದು ಪುಣೆಯಲ್ಲಿ ನಡೆದಿದೆ.
ಪುಣೆಯ ಸದರ್ನ್ ಕಮಾಂಡ್ ಆಸ್ಪತ್ರೆಯಲ್ಲಿ ಸೇನಾ ಯೋಧರು ಸೇರಿದಂತೆ ಮೃತ ಮಹಿಳೆಯ ಅಂಗಾಂಗ ದಾನವು 5 ಜನರ ಜೀವಗಳನ್ನು ಉಳಿಸಿದೆ. ಮಹಿಳೆಗೆ ಮೆದುಳಿನ ಸಮಸ್ಯೆ ಉಂಟಾಗಿದ್ದರಿಂದ ಆಕೆಯನ್ನು ಕಮಾಂಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಘಲಕಾರಿಯಾಗದೇ ಆಕೆ ಸಾಯುವ ಪರಿಸ್ಥಿತಿಯಲ್ಲಿ ಇದ್ದಳು. ಈ ಹಿನ್ನೆಲೆ ಆಕೆಯ ಕುಟುಂಬದವರು ಮಹಿಳೆಯ ಅಗಾಂಗಗಳನ್ನು ಅಗತ್ಯ ಇರುವ ರೋಗಿಗಳಿಗೆ ದಾನ ಮಾಡಬೇಕೆಂದು ನಿರ್ಧರಿಸಿದ್ದಾರೆ. ಇದನ್ನೂ ಓದಿ: ವೀಡಿಯೋ ಬಂದ್ ವಿಚಾರ – ಯಾರು ಏನೇ ಹೇಳಲಿ, ಈಗ ಮೊದಲಿನಂತೆ ನಿಯಮ ಇರಲಿದೆ: ಸಿಎಂ
ಜುಲೈ 14 ರ ರಾತ್ರಿ ಮತ್ತು ಜುಲೈ 15 ರ ಮುಂಜಾನೆ, ಮೂತ್ರಪಿಂಡದ ಅಂಗಗಳನ್ನು ಭಾರತೀಯ ಸೇನೆಯ ಇಬ್ಬರು ಸೈನಿಕರಿಗೆ ಕಸಿ ಮಾಡಲಾಯಿತು. ಕಣ್ಣುಗಳನ್ನು ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು ಕಣ್ಣಿನ ಬ್ಯಾಂಕ್‍ನಲ್ಲಿ ಸಂರಕ್ಷಿಸಲಾಗಿದೆ ಮತ್ತು ಪುಣೆಯ ರೂಬಿ ಹಾಲ್ ಕ್ಲಿನಿಕ್‍ನಲ್ಲಿ ರೋಗಿಯೊಬ್ಬರಿಗೆ ಮಹಿಳೆಯ ಲಿವರ್ ನೀಡಲಾಯಿತು.
A benevolent gesture of organ donation after death and well coordinated, relentless efforts of medical specialists through entire night at Command Hospital #SouthernCommand gave life & eyesight to five severely ill patients.#WeCare#OrganDonation pic.twitter.com/IuU4OQi1lF
— PRO Defence Pune (@PRODefPune) July 15, 2022
ಈ ಕುರಿತು ಟ್ವೀಟ್ ಮಾಡಿದ ಅಧಿಕಾರಿಗಳು ಅಂಗಾಂಗ ದಾನದ ಬಗ್ಗೆ ಶ್ಲಾಘಿಸಿದರು. ಟ್ವೀಟ್‍ನಲ್ಲಿ, ಸದರ್ನ್ ಕಮಾಂಡ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಜ್ಞರ ಉತ್ತಮ ಕೆಲಸ, ಅವರ ಪಟ್ಟುಬಿಡದ ಪ್ರಯತ್ನ ಐದು ತೀವ್ರ ಅಸ್ವಸ್ಥ ರೋಗಿಗಳಿಗೆ ಜೀವನ ಮತ್ತು ದೃಷ್ಟಿ ನೀಡಿತು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಖಶೋಗಿ ಹತ್ಯೆಗೆ ಸೌದಿ ಕ್ರೌನ್ ಪ್ರಿನ್ಸ್ ಹೊಣೆಗಾರಿಕೆ: ಬೈಡನ್