ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಕಾಂಬಿನೇಷನ್ ನ ಬ್ರಹ್ಮಾಸ್ತ್ರ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಕನ್ನಡವೂ ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿರುವ ಟ್ರೈಲರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ರಣಬೀರ್ ಮತ್ತು ಅಲಿಯಾ ಅಭಿಮಾನಿಗಳು ಇಬ್ಬರ ನಟನೆಗೆ ಜೈ ಹೋ ಅಂದಿದ್ದಾರೆ. ಆದರೆ, ಈ ಟ್ರೈಲರ್ ನಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ಅನ್ನುವಂತಹ ದೃಶ್ಯವೊಂದು ಇದೆ ಎನ್ನುವ ಕಾರಣಕ್ಕಾಗಿ ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ರಣಬೀರ್ ಕಪೂರ್ ಸ್ಪೀಡ್ ಆಗಿ ಬಂದು ದೇವಸ್ಥಾನದ ಒಳಗೆ ನುಗ್ಗುತ್ತಾರೆ. ಅಲ್ಲಿರುವ ಘಂಟೆ ಬಾರಿಸುತ್ತಾರೆ. ಜಿಗಿದು ಗಂಟೆ ಬಾರಿಸುವಾಗ, ಅವರು ಧರಿಸಿರುವ ಶೂ ಕಾಣುತ್ತದೆ. ಶೂ ಧರಿಸಿ ದೇವಸ್ಥಾನ ಪ್ರವೇಶ ಮಾಡಿದ್ದಕ್ಕೆ ನೆಟ್ಟಿಗರು ಸಿಕ್ಕಾಪಟ್ಟೆ ಆಕ್ರೋಶಗೊಂಡಿದ್ದಾರೆ. ಶೂ ಇರುವಂತಹ ಕಾಲ್ ಗಳು ಫೋಟೋವನ್ನೂ ವೈರಲ್ ಕೂಡ ಮಾಡಿದ್ದಾರೆ. ದೇವರಿಗೆ ಅಪಮಾನ ಮಾಡಿದ್ದಕ್ಕೆ ಸಿನಿಮಾ ಸೋಲಲಿ ಎಂದು ಕಾಮೆಂಟ್ ಕೂಡ ಮಾಡಿದ್ದಾರೆ. ಇದನ್ನೂ ಓದಿ : ಜೈ ಶ್ರೀರಾಮ್ ಎನ್ನುತ್ತಾ ಮುಸ್ಲಿಮರನ್ನು ಹತ್ಯೆ ಮಾಡುವುದು, ಕಾಶ್ಮೀರ ಪಂಡಿತರ ಹತ್ಯೆಗೆ ಸಮ: ಸಾಯಿ ಪಲ್ಲವಿ ವೀಡಿಯೋ ವೈರಲ್
ಇದೊಂದು ಭಾರತ ಪುರಾಣದ ಆಧಾರದಲ್ಲಿ ಮೂಡಿ ಬಂದಿರುವ ಸಿನಿಮಾವಾಗಿದ್ದರಿಂದ, ರಣಬೀರ್ ತುಂಬಾ ಮುತುವರ್ಜಿ ತಗೆದುಕೊಂಡು ನಟಿಸಬೇಕಿತ್ತು. ಈ ದೃಶ್ಯವನ್ನು ಅವರ ಅಭಿಮಾನಿಗಳು ಕೂಡ ಇಷ್ಟ ಪಡಲಾರರು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ. ರಣಬೀರ್ ಮತ್ತು ಅಲಿಯಾ ಭಟ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಈ ಸಿನಿಮಾ ಶುರುವಾಗಿ ಐದಾರು ವರ್ಷಗಳೇ ಆಗಿದ್ದವು. ಇದೀಗ ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡು ತೆರೆಗೆ ಬರಲು ಸಜ್ಜಾಗಿದೆ ಸಿನಿಮಾ. ಈ ಹೊತ್ತಿನಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.