ಕಾಂತಾರ ಅಧ್ಯಾಯ 1 (Kantara Chapter 1) ಬಿಡುಗಡೆಗೆ ಕೌಂಟ್‌ಡೌನ್ ಶುರುವಾದ ಬೆನ್ನಲ್ಲೇ ಮೊದಲ ಹಾಡು ಬ್ರಹ್ಮಕಲಶ (Brahmakalasha) ಹಾಡನ್ನು ಚಿತ್ರತಂಡ ಮಧ್ಯರಾತ್ರಿ ರಿಲೀಸ್ ಮಾಡಿದೆ. ಇದು ಕೇವಲ ಆಡಿಯೋ ಹಾಡಾಗಿದ್ದು ಯಾವುದೇ ಸುಳಿವನ್ನೂ ಬಿಟ್ಟುಕೊಡದ ತಂಡ ರಹಸ್ಯ ಕಾಪಾಡಿಕೊಂಡಿದೆ.
`ಗೊತ್ತಿಲ್ಲ ಶಿವನೇ’ ಎಂಬ ಪದಗಳಿಂದ ಶುರುವಾಗುವ ಶಿವನ ಆರಾಧನೆಯ ಹಾಡು ಅಭಿಮಾನಿಗಳ ಮನ ಗೆದ್ದಿದೆ. ವರಾಹ ರೂಪಂ (Varaha Roopam Daiva Va Rishtam) ಹಾಡನ್ನು ಬರೆದ ಶಶಿರಾಜ್ ಕಾವೂರ್ (Shashiraj Kavoor) ಈ ಹಾಡನ್ನು ರಚಿಸಿದ್ದಾರೆ.
ಭಜನೆ ರೀತಿಯ ಭಕ್ತಿಗೀತೆಗೆ ಅಜನೀಶ್ ಲೋಕನಾಥ್ ಸಂಗೀತಕ್ಕೆ ಅಬ್ಬಿ ವಿ ಹಿನ್ನೆಲೆ ಗಾಯನವಿದೆ. ಕಾಂತಾರ ಮೊದಲ ಭಾಗಕ್ಕೆ ವರಾಹ ರೂಪಂ ಹಾಡು ಮುಖ್ಯಪ್ರಾಣದಂತಿತ್ತು. ಸಿನಿಮಾ ರಿಲೀಸ್ ಆದ್ಮೇಲೆ ಈ ಹಾಡನ್ನ ಟೀಮ್ ರಿಲೀಸ್ ಮಾಡಿತ್ತು. ಆದರೆ ಸಿನಿಮಾ ರಿಲೀಸ್‌ಗೂ ಮುನ್ನವೇ ಚಿತ್ರದ ಪ್ರಮುಖ ಹಾಡನ್ನ ಇದೀಗ ಚಿತ್ರತಂಡ ರಿಲೀಸ್ ಮಾಡಿರುವುದು ವಿಶೇಷ.
ಈ ಹಾಡು ಕೇಳಿದಾಗ ರೋಮಾಂಚನೆ ಆಯ್ತು… ಹೃದಯ ತಟ್ಟಿದರು. ‘ಬ್ರಹ್ಮಕಲಶ’ದ ಸಂಗೀತ, ಭಾವನೆ, ಮತ್ತು ದರ್ಶನ ಎಲ್ಲಾ ಸೇರಿ ಒಂದು ದೇವರ ಅನುಭವವಾಗಿ ಕಂಡಿತು. ಇಷ್ಟು ಆಳವಾದ ಸಂಸ್ಕೃತಿ ಮತ್ತು ಭಕ್ತಿಯನ್ನು ಇಷ್ಟು ಶಕ್ತಿಯಾಗಿ ತೋರಿಸುವುದು ಕೇವಲ ರಿಷಬ್ ಶೆಟ್ಟಿ ಹಾಗು ಹೊಂಬಾಳೆ ಫಿಲ್ಮ್ಸ್ ಅವರಿಗೆ ಮಾತ್ರ ಸಾಧ್ಯ. ಕನ್ನಡ ಸಿನಿಮಾದ ಬಗ್ಗೆ ನಿಜವಾಗಿಯೂ ಹೆಮ್ಮೆ ಆಗುತ್ತದೆ ಎಂದು ಕಮೆಂಟ್ ಹಾಕಿ ಜನ ಮೆಚ್ಚುಗೆ ಸೂಚಿಸಿದ್ದಾರೆ.

