ಬೆಂಗಳೂರು: ವಿಧಾನ ಮಂಡಲದ ಅಧಿವೇಶನ ಮುಗಿದ ಕೂಡಲೇ ಅನರ್ಹ ಬಿಪಿಎಲ್ ಕಾರ್ಡ್ (BPL Card) ಪರಿಷ್ಕರಣೆ ಪ್ರಕ್ರಿಯೆ ಪ್ರಾರಂಭ ಮಾಡೋದಾಗಿ ಆಹಾರ ಸಚಿವ ಮುನಿಯಪ್ಪ (KH Muniyappa) ವಿಧಾನ ಪರಿಷತ್‌ನಲ್ಲಿ ಘೋಷಣೆ ಮಾಡಿದ್ದಾರೆ.
ವಿಧಾನ ಪರಿಷತ್ (Legislative Council) ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಪ್ರತಾಪ್ ಸಿಂಹ ನಾಯಕ್, ಕಾಂಗ್ರೆಸ್‌ನ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಪ್ರಶ್ನೆ ಕೇಳಿದರು. ಪ್ರತಾಪ್ ಸಿಂಹ ನಾಯಕ್ ಮಾತಾಡಿ, ರಾಜ್ಯದಲ್ಲಿ ಹೊಸ ರೇಷನ್ ಕಾರ್ಡ್ (Ration Card) ಸಿಗುತ್ತಿಲ್ಲ. ಜನರು ಅರ್ಜಿ ಹಾಕಿ ಕಾಯುತ್ತಿದ್ದಾರೆ. ಸರ್ಕಾರ ಸಿದ್ಧ ಉತ್ತರ ಕೊಡುತ್ತಿದೆ. ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ತರಹ ಸರ್ಕಾರ ಮಾಡುತ್ತಿದೆ. ಕೂಡಲೇ ಅರ್ಜಿ ಹಾಕಿರೋರಿಗೆ ರೇಷನ್ ಕಾರ್ಡ್ ಕೊಡಬೇಕು. ಸಮಸ್ಯೆ ಪರಿಹಾರ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: 540 ಗಸ್ತು ಅರಣ್ಯ ರಕ್ಷಕರ ನೇಮಕಾತಿಗೆ ಪ್ರಕ್ರಿಯೆ: ಈಶ್ವರ್ ಖಂಡ್ರೆ
ಯತೀಂದ್ರ ಸಿದ್ದರಾಮಯ್ಯ ಮಾತಾಡಿ, ಮೂರು ವರ್ಷಗಳಿಂದ ಬಿಪಿಎಲ್ ಕಾರ್ಡ್ ಪೆಂಡಿಂಗ್ ಜಾಸ್ತಿ ಇವೆ. ಇದರಿಂದ ಬಡವರಿಗೆ ಸಮಸ್ಯೆ ಆಗುತ್ತಿದೆ. ಗೃಹಲಕ್ಷ್ಮಿ, ಆಸ್ಪತ್ರೆ ಅನೇಕ ಕಡೆ ರೇಷನ್ ಕಾರ್ಡ್ ಬೇಕಾಗಿದೆ. ಅನರ್ಹರ ಕಾರ್ಡ್ ರದ್ದು ಮಾಡಿ. ಅವಶ್ಯಕತೆ ಇರೋರಿಗೆ ರೇಷನ್ ಕಾರ್ಡ್ ಕೊಡಬೇಕು ಎಂದರು. ಇದನ್ನೂ ಓದಿ: ಹೆಬ್ಬಾಳ ಫ್ಲೈಓವರ್ ಉದ್ಘಾಟಿಸಿದ ಡಿಸಿಎಂ – ಮೇಲ್ಸೇತುವೆಯಲ್ಲಿ ಡಿಕೆಶಿ ಬೈಕ್ ಓಡಿಸಿದ ಸ್ಟೈಲ್ ನೋಡಿ
ಇದಕ್ಕೆ ಸಚಿವ ಮುನಿಯಪ್ಪ ಉತ್ತರ ನೀಡಿ, ಕರ್ನಾಟಕ ರಾಜ್ಯದಲ್ಲಿ 74% ಬಿಪಿಎಲ್ ಕಾರ್ಡ್ ಇವೆ. ಬೇರೆ ಯಾವುದೇ ದಕ್ಷಿಣ ರಾಜ್ಯದಲ್ಲಿ ಇಷ್ಟು ಬಿಪಿಎಲ್ ಕಾರ್ಡ್ ಇಲ್ಲ. ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಜಾಸ್ತಿ ಇವೆ. ಈಗ 1.28 ಕೋಟಿ ಕಾರ್ಡ್‌ಗೆ ಅಕ್ಕಿ ಕೊಡಲಾಗುತ್ತಿದೆ. 3.27 ಲಕ್ಷ ಕಾರ್ಡ್ ಬಿಪಿಎಲ್ ಕಾರ್ಡ್ ಕೊಡೋಕೆ ಬಾಕಿ ಇದೆ. ಎಪಿಎಲ್ ಅರ್ಹತೆ ಇರೋರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ. ಅಧಿವೇಶನ ಮುಗಿದ ಬಳಿಕ ಅದನ್ನ ಪರಿಷ್ಕರಣೆ ಶುರು ಮಾಡುತ್ತೇವೆ. ಅಧಿವೇಶನ ಮುಗಿದ ಮೇಲೆ ಅನರ್ಹ ಬಿಪಿಎಲ್ ಕಾರ್ಡ್ ಪರಿಷ್ಕರಣೆ ಪ್ರಕ್ರಿಯೆ ಶುರು. ಅನರ್ಹರ ಬಿಪಿಎಲ್ ಕಾರ್ಡ್ ರದ್ದು ಮಾಡಿ ಅರ್ಜಿ ಹಾಕಿರೋ ಅರ್ಹರಿಗೆ ಬಿಪಿಎಲ್ ಕಾರ್ಡ್ ಕೊಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸಂಜೆಯೊಳಗೆ ಮಹೇಶ್ ಶೆಟ್ಟಿ ತಿಮರೋಡಿ ಅರೆಸ್ಟ್ ಮಾಡಲು ಪರಮೇಶ್ವರ್ ಸೂಚನೆ
ಎಪಿಎಲ್ ಕಾರ್ಡ್ ರಾಜ್ಯದಲ್ಲಿ 25 ಕಾರ್ಡ್ ಇವೆ. ಆದರೆ 1 ಲಕ್ಷ ಜನರು ಮಾತ್ರ ಅಕ್ಕಿ ಪಡೆಯುತ್ತಿದ್ದಾರೆ. ಅದಕ್ಕೆ ಎಪಿಎಲ್ ಕಾರ್ಡ್ ಕೊಡೋದು ನಿಲ್ಲಿಸಿದ್ದೇವೆ. ಅಗತ್ಯ ಇದ್ದರೆ ಎಪಿಎಲ್ ಕಾರ್ಡ್ ಕೊಡ್ತೀವಿ ಅಂತ ತಿಳಿಸಿದರು. ಇದನ್ನೂ ಓದಿ: 2026ರ ಡಿಸೆಂಬರ್ ಒಳಗೆ 1,80,253 ಮನೆ ಪೂರ್ಣ – ಜಮೀರ್ ಗ್ಯಾರಂಟಿ