ಬಳ್ಳಾರಿ: ಎಲ್‌ಎಲ್‌ಸಿ ಕಾಲುವೆಯಲ್ಲಿ (Canal) ಕಾಲು ಜಾರಿಬಿದ್ದು ಓರ್ವ ಬಾಲಕ ಮೃತಪಟ್ಟಿದ್ದು, ಇಬ್ಬರು ಮಕ್ಕಳನ್ನ ರಕ್ಷಣೆ ಮಾಡಿರುವ ಘಟನೆ ಜಿಲ್ಲೆಯ ಸಿರುಗುಪ್ಪ (Siruguppa) ತಾಲೂಕಿನ ಶ್ರೀನಿವಾಸ್ ಕ್ಯಾಂಪ್ ಬಳಿ ನಡೆದಿದೆ.
ವಿಕ್ರಂ(14) ಮೃತ ಬಾಲಕ. ವಿಪರೀತ ಬಿಸಿಲಿನ ಪರಿಣಾಮ ವಿಕ್ರಂ, ಶಂಭುಲಿಂಗ ಹಾಗೂ ದೀಪು ಎಂಬ ಮೂವರು ಯುವಕರು ಸ್ನಾನಕ್ಕೆಂದು ಎಲ್‌ಎಲ್‌ಸಿ ಕಾಲುವೆಗೆ ತೆರಳಿದ್ದರು. ಕಾಲುವೆಗೆ ಇಳಿಯುವಾಗ ಮೂವರೂ ಬಾಲಕರು ಕಾಲು ಜಾರಿ ಬಿದ್ದಿದ್ದರು. ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯ ಕರಾವಳಿಗೆ ತಟ್ಟಿದ ಬರ – 20 ಗ್ರಾಮಗಳಲ್ಲಿ ಒಂದು ತೊಟ್ಟು ನೀರಿಲ್ಲ, ಬತ್ತಿದ ಬಾವಿಗಳ ಅಂತರ್ಜಲ
ಈ ವೇಳೆ ವಿಕ್ರಂ ನೀರಿನ ರಭಸಕ್ಕೆ ಸಿಲುಕಿ ಕಾಲುವೆಯಲ್ಲಿ ಕೊಚ್ಚಿ ಹೋಗಿದ್ದಾನೆ. ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಇಬ್ಬರು ಬಾಲಕರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: ಹುಸ್ಕೂರು ಮದ್ದೂರಮ್ಮ ಜಾತ್ರೆ ತೇರು ದುರಂತ – ಕೆಳಹಂತದ 4 ಅಧಿಕಾರಿಗಳು ಅಮಾನತು
ವಿಕ್ರಂ ಮೃತದೇಹಕ್ಕಾಗಿ ಅಗ್ನಿಶಾಮಕದಳ ಸಿಬ್ಬಂದಿಯಿಂದ ಶೋಧಕಾರ್ಯ ಮುಂದುವರಿದಿದ್ದು, ಸಿರಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆನೇಕಲ್| ಪತ್ನಿ ದೇಹ ತುಂಡರಿಸಿ ಸೂಟ್‌ಕೇಸ್‌ಗೆ ತುಂಬಿದ ಪಾಪಿ ಪತಿ