ಬಾಲಕಿಯರಿಗೆ ಶಾಲೆ ತೆರೆಯುವವರೆಗೂ ನಾವು ಹೋಗಲ್ಲ – ಅಫ್ಘಾನ್ ಬಾಲಕರ ಪಟ್ಟು

Public TV
2 Min Read
Afghanistan school

ಕಾಬೂಲ್: ಅಫ್ಘಾನಿಸ್ತಾನದಲ್ಲಿ ಬಾಲಕಿಯರಿಗೆ ಶಾಲೆ ತೆರೆಯುವವರೆಗೂ ನಾವು ಶಾಲೆಗೆ ಹೋಗುವುದಿಲ್ಲ ಎಂದು ಬಾಲಕರು ಪಟ್ಟು ಹಿಡಿದು ಮನೆಯಲ್ಲಿಯೇ ಇದ್ದಾರೆ.

Afghanistan school

ಈ ಬಗ್ಗೆ ಮಾತನಾಡಿದ 12ನೇ ತರಗತಿ ವಿದ್ಯಾರ್ಥಿಯೊಬ್ಬರು, ಮಹಿಳೆಯರು ಸಮಾಜದಲ್ಲಿ ಅರ್ಧದಷ್ಟಿದ್ದಾರೆ. ಬಾಲಕಿಯರಿಗೆ ಕೂಡ ಶಾಲೆಗಳು ತೆರೆಯುವವರೆಗೂ ನಾವು ಶಾಲೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ಆಪರೇಷನ್ ಪಾಲಿಟಿಕ್ಸ್ ಶುರು – ಬಿಜೆಪಿ, ಜೆಡಿಎಸ್ ಶಾಸಕರಿಗೆ ಡಿಕೆಶಿ ಗಾಳ..?

ಬಾಲಕಿಯರು ಬೆಳಗ್ಗೆ ಮತ್ತು ಬಾಲಕರು ಮಧ್ಯಾಹ್ನ ಓದಬೇಕು. ಅಲ್ಲದೇ ಅಧ್ಯಾಪಕರು ಹುಡುಗರಿಗೆ ಮತ್ತು ಮಹಿಳಾ ಅಧ್ಯಾಪಕಿಯರು ಹುಡುಗಿಯರಿಗೆ ಪಾಠಮಾಡಬೇಕು ಎಂದು ಅಫ್ಘಾನಿಸ್ತಾನದ ಶಿಕ್ಷಣ ಸಚಿವಾಲಯ ಪ್ರಕಟಿಸಿದೆ. ಓದುವುದರಲ್ಲಿ ಆಸಕ್ತಿ ಕಡಿಮೆ ಇರುವ ಹುಡುಗಿಯರಿಗೆ ಶಾಲೆಯನ್ನು ತೆರೆಯಬೇಕೆ ಎಂಬುವುದರ ಬಗ್ಗೆ ಇನ್ನೂ ಚರ್ಚೆ ನಡೆಸಲಾಗುತ್ತಿದೆ ಎಂದು ಕಾಬೂಲ್‍ನ ಖಾಸಗಿ ಶಾಲೆಯ ಕೆಲವು ಶಿಕ್ಷಕರು ಹೇಳಿದ್ದಾರೆ.

ಹೆಣ್ಣು ಮಕ್ಕಳಿಗೆ ನೀಡುವ ಶಿಕ್ಷಣವು ಒಂದು ಪೀಳಿಗೆಯನ್ನು ಸರಿಪಡಿಸುತ್ತದೆ. ಗಂಡು ಮಕ್ಕಳಿಗೆ ನೀಡುವ ಶಿಕ್ಷಣವು ಕುಟುಂಬದ ಮೇಲೆ ಪರಿಣಾಮ ಬೀರುಬಹುದು. ಆದರೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದರಿಂದ ಅದು ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಹೆಣ್ಣು ಮಕ್ಕಳು ಶಿಕ್ಷಣವನ್ನು ಪುನಾರಂಭಿಸಲು ಮತ್ತು ತಮ್ಮ ಅಧ್ಯಯನವನ್ನು ಪೂರ್ಣಗೊಳಿಸುವ ವಿಷಯದ ಬಗ್ಗೆ ನಾವು ಸೂಕ್ಷ್ಮವಾಗಿ ಆಲೋಚಿಸುತ್ತಿದ್ದೇವೆ ಎಂದು ಖಾಸಗಿ ಶಾಲೆಯೊಂದರ ಪ್ರಾಂಶುಪಾಲರು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ಬಿಹಾರದ ಸಿಎಂ ಮುಂದಿನ ಪ್ರಧಾನಿ ಆಗ್ಬೇಕು: ಜಮಾ ಖಾನ್

ತಾಲಿಬಾನ್ ಸರ್ಕಾರ ಇತ್ತೀಚೆಗಷ್ಟೇ ಪ್ರೌಢ ಶಾಲೆಗಳನ್ನು ಹುಡುಗರಿಗೆ ತೆರೆಯಲು ಅನುಮತಿ ನೀಡಿದ್ದು, ಅವರಿಗೆ ಅಧ್ಯಾಪಕರು ಪಾಠ ಮಾಡಬೇಕೆಂದು ಸೂಚಿಸಿತ್ತು. ಶನಿವಾರದಿಂದ 7-12ನೇ ತರಗತಿವರೆಗೂ ಬಾಲಕರಿಗೆ ತರಗತಿಗಳನ್ನು ಪುನರಾಂಭಿಸಲು ಘೋಷಿಸಿದ ಶಿಕ್ಷಣ ಸಚಿವಾಲಯವು ಪ್ರಕಟಣೆಯಲ್ಲಿ ಬಾಲಕಿಯರಿಗೆ ಹಾಗೂ ಮಹಿಳಾ ಶಿಕ್ಷಕರ ಬಗ್ಗೆ ಯಾವುದೇ ಮಾಹಿತಿಯನ್ನು ಉಲ್ಲೇಖಿಸಿಲ್ಲ.

Share This Article
Leave a Comment

Leave a Reply

Your email address will not be published. Required fields are marked *