ತಿರುವನಂತಪುರಂ: ಶಾಲಾ ತರಗತಿಗಳಲ್ಲಿ ಹುಡುಗ-ಹುಡುಗಿಯರು ಒಟ್ಟಿಗೇ ಕೂರೋದು ಅಪಾಯಕಾರಿ ಎಂದು ಕೇರಳ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪ್ರಧಾನ ಕಾರ್ಯದರ್ಶಿ ಪಿಎಂಎ ಸಲಾಮ್ ವಿವಾದಾತ್ಮಕ ಹೇಳಿಕೆ ನಿಡಿದ್ದಾರೆ.
Advertisement
ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಕುರಿತು ಅವರು ಮಾತನಾಡಿದ್ದು, ಇಂತಹ ಬೆಳವಣಿಗೆ ಅಪಾಯಕಾರಿ. ಅಷ್ಟಕ್ಕೂ ಹುಡುಗ ಹುಡುಗಿಯರು ತರಗತಿಯಲ್ಲಿ ಒಟ್ಟಿಗೆ ಕುಳಿತುಕೊಳ್ಳುವ ಅವಶ್ಯಕತೆ ಏನು? ನೀವು ಅವರನ್ನು ಏಕೆ ಒತ್ತಾಯಿಸುತ್ತಿದ್ದೀರಿ ಅಥವಾ ಅಂತಹ ಅವಕಾಶಗಳನ್ನು ಏಕೆ ಸೃಷ್ಟಿಸುತ್ತಿದ್ದೀರಿ? ಇದು ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳು ಅಧ್ಯಯನದಿಂದ ವಿಮುಖರಾಗುತ್ತಾರೆ ಎಂದು ಸಲಾಮ್ ಕೇರಳ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಮನೆಯ ಸಾಮಾನ್ಯ ವಸ್ತುಗಳ ಮೇಲೂ ಉಳಿಯಬಹುದು ಮಂಕಿಪಾಕ್ಸ್ ವೈರಸ್ – ವರದಿ
Advertisement
Advertisement
ಲಿಂಗ ತಟಸ್ಥತೆಯು ಧಾರ್ಮಿಕ ವಿಷಯವಲ್ಲ, ನೈತಿಕ ಸಮಸ್ಯೆಯಾಗಿದೆ. ಈ ಲಿಂಗ ತಟಸ್ಥತೆಯು ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುತ್ತದೆ. ಹಾಗಾಗಿ ಈ ನೀತಿಯನ್ನು ಸರ್ಕಾರ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಜೊತೆ ಜೊತೆಯಲಿ ಗಲಾಟೆ: ಮಕ್ಕಳ ಮೇಲೆ ಆಣೆ ಪ್ರಮಾಣಕ್ಕೆ ಮುಂದಾದ ನಟ ಅನಿರುದ್ಧ
Advertisement
ಈ ಹಿಂದೆಯೂ ಶಿಕ್ಷಣ ಸಂಸ್ಥೆಗಳಲ್ಲಿ ಲಿಂಗ ತಟಸ್ಥತೆಯ ವಿಚಾರದಲ್ಲಿ ಹಿಂದೆ ಸರಿಯುವಂತೆ ಮುಸ್ಲಿಂ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿದ್ದವು.