ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ (Cannes Film Festival) ಮಿಂಚಿದ್ದಾರೆ. ಸೌಂದರ್ಯ ಗಣಿಯಂತೆ ಕಂಗೊಳಿಸಿದ ಜಾನ್ವಿ ಕಪೂರ್‌ಗೆ ಬಾಯ್‌ಫ್ರೆಂಡ್ ಶಿಖರ್ ಪಹರಿಯಾ (Shikhar Pahariya) ನನ್ನ ದೇವತೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಬಾಲಿವುಡ್‌ಗೆ ಅಥಿಯಾ ಗುಡ್ ಬೈ – ಅಧಿಕೃತವಾಗಿ ತಿಳಿಸಿದ ತಂದೆ ಸುನೀಲ್ ಶೆಟ್ಟಿ
78ನೇ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಜಾನ್ವಿ ಕಪೂರ್ ಅವರು ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ‘ದೇವರ’ ನಟಿ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ವಿವಿಧ ಭಂಗಿಗಳಲ್ಲಿ ಪೋಸ್ ಕೊಟ್ಟಿರುವ ಫೋಟೋಗಳನ್ನು ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ನನ್ನ ದೇವತೆ, ನೀವು ರಾತ್ರಿಯನ್ನು ಬೆಳಗಿಸುತ್ತೀರಿ ಎಂದು ಗೆಳೆಯ ಶಿಖರ್ ಕಾಮೆಂಟ್ ಮಾಡಿದ್ದಾರೆ. ಇದು ಅಭಿಮಾನಿಗಳ ಗಮನ ಸೆಳೆದಿದೆ.
ಸಾಕಷ್ಟು ಸಮಯದಿಂದ ಶಿಖರ್ ಪಹರಿಯಾ ಜೊತೆ ಜಾನ್ವಿ ಡೇಟಿಂಗ್ ಮಾಡ್ತಿದ್ದಾರೆ ಎನ್ನಲಾದ ಸುದ್ದಿ ಹರಿದಾಡುತ್ತಿದೆ. ಆದರೆ ಇದುವರೆಗೂ ಈ ಬಗ್ಗೆ ನಟಿ ಅಧಿಕೃತವಾಗಿ ತಿಳಿಸಿಲ್ಲ. ಆದರೆ ಇತ್ತೀಚಿನ ಸಮಾರಂಭವೊಂದರಲ್ಲಿ ಜಾನ್ವಿ ‘ಶಿಖು’ ಎಂದು ಹೆಸರಿರುವ ಪೆಂಡೆಂಟ್ ಅನ್ನು ಧರಿಸಿದ್ದರು. ಹೀಗಾಗಿ ಡೇಟಿಂಗ್ ಸುದ್ದಿಗೆ ಮತ್ತಷ್ಟು ಪುಷ್ಠಿ ನೀಡಿತ್ತು. ಇದನ್ನೂ ಓದಿ:100 ಮಿಲಿಯನ್ ಮಿನಿಟ್ ಸ್ಟ್ರೀಮಿಂಗ್ ಕಂಡ ಜಾಜಿಯ ರೋಚಕ ಕಥೆ- Zee5ನಲ್ಲಿ ‘ಅಯ್ಯನ ಮನೆ’ ರೆಕಾರ್ಡ್





