ಸೋಷಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಬೈಕಾಟ್ ಬಿಸಿಗೆ ಬಾಲಿವುಡ್ ಬೆದರಿ ಬೆಂಡಾಗಿದೆ. ಲಾಲ್ ಸಿಂಗ್ ಚಡ್ಡಾ, ಬ್ರಹ್ಮಾಸ್ತ್ರ, ವಿಕ್ರಮ್ ವೇದಾ ಸೇರಿದಂತೆ ಹಲವು ಚಿತ್ರಗಳು ಬೈಕಾಟ್ ಹೊಡೆತಕ್ಕೆ ತತ್ತರಿಸಿ ಹೋದವು. ಬಾಕ್ಸ್ ಆಫೀಸಿನಲ್ಲಿ ಮಕಾಡೆ ಮಲಗುವುದಷ್ಟೇ ಅಲ್ಲ, ಬಾಲಿವುಡ್ ಯುಗವೇ ಮುಗಿಯಿತು ಎನ್ನುವಷ್ಟರ ಮಟ್ಟಿಗೆ ಬಳಲಿದವು. ಆಯಾ ಕಾಲಕ್ಕೆ ಬೈಕಾಟ್ ಬಗ್ಗೆ ನಟರು ಕಾಮೆಂಟ್ ಮಾಡಿದರೂ, ನಟ ಸೈಫ್ ಅಲಿಖಾನ್ ಅಷ್ಟು ನೇರವಾಗಿ ಯಾರೂ ಮಾತನಾಡಿರಲಿಲ್ಲ.
Advertisement
ಬಾಲಿವುಡ್ ನಟ ಸೈಫ್ ಅಲಿಖಾನ್ ಇದೀಗ ಬೈಕಾಟ್ ಬಗ್ಗೆ ಮಾತನಾಡಿದ್ದು, ಬೈಕಾಟ್ ಮಾಡುವವರು ನಿಜವಾದ ಪ್ರೇಕ್ಷಕರೇ ಅಲ್ಲ ಎಂದು ಆರೋಪಿಸಿದ್ದಾರೆ. ನಿಜವಾದ ಸಿನಿ ಪ್ರೇಕ್ಷಕರು ಚಿತ್ರಗಳನ್ನು ನೋಡುತ್ತಾರೆ. ಜಾತಿ, ಧರ್ಮ ಎನ್ನುವುದಿಲ್ಲ. ಆದರೆ, ಇಲ್ಲಿ ಕೆಲವರು ವಿನಾಕಾರಣ ಸಿನಿಮಾ ರಂಗದ ಮೇಲೆ ಹಿಡಿತ ಸಾಧಿಸಲು ಹೊರಟಂತಿದೆ. ಅದೇ ಬೈಕಾಟ್ ಆಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ:`ಕಾಂತಾರ’ ಚಿತ್ರದ ಹಾಡಿಗೆ ಧ್ವನಿಯಾದ ಜರ್ಮನ್ ಅಂಧ ಗಾಯಕಿ
Advertisement
Advertisement
ಈ ಕುರಿತು ಕೆಲವು ಸಲಹೆಗಳನ್ನೂ ನೀಡಿರುವ ಸೈಫ್, ಬೈಕಾಟ್ ಅನ್ನು ಸಣ್ಣದರಲ್ಲಿ ಇರುವಾಗಲೇ ಹತ್ತಿಕ್ಕಬೇಕಿತ್ತು. ಅದನ್ನು ಇಷ್ಟೊಂದು ದೊಡ್ಡದಾಗಿ ಬೆಳೆಯಲು ಬಿಡಬಾರದು. ಬೈಕಾಟ್ ಬಿಸಿಯಿಂದ ತಪ್ಪಿಸಿಕೊಳ್ಳಲು ಬಾಲಿವುಡ್ ಒಂದಾಗಬೇಕು. ಇಡೀ ಬಾಲಿವುಡ್ ಒಂದಾದರೆ, ಎಂತಹ ಶಕ್ತಿಯನ್ನಾದರೂ ಎದುರಿಸೋಕೆ ಬರುತ್ತದೆ ಎಂದು ಸಂದರ್ಶನವೊಂದರಲ್ಲಿ ಅವರು ಹೇಳಿದ್ದಾರೆ.