ಚೆನ್ನೈ: ಸೈಕಲ್ ಕದ್ದ ಕಳ್ಳನನ್ನು ಬೆನ್ನಟ್ಟಿದೂ ಅದನ್ನು ವಾಪಸ್ ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದ ಬಾಲಕನಿಗೆ ಪೊಲೀಸರು ಸೈಕಲ್ ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನ್ನ ಸೈಕಲ್ ವಾಪಸ್ ಸಿಕ್ಕಾಗ ಬಾಲಕನ ಸಂತಸಕ್ಕೆ ಪಾರವೇ ಇರಲಿಲ್ಲ. ಖದೀಮ ಸೈಕಲ್ ಕದ್ದು ಅದರೊಂದಿಗೆ ಎಸ್ಕೇಪ್ ಆಗಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ದೃಶ್ಯದಲ್ಲಿ ಕೆಂಪು ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಧರಿಸಿದ ವ್ಯಕ್ತಿಯು ಫೆಬ್ರವರಿ 3ರಂದು ಸಂಜೆ 7.30ರ ಸುಮಾರಿಗೆ ಚೆನ್ನೈನಲ್ಲಿರುವ ಪುರಸಾವಲ್ಕಮ್ ಬಳಿ ಇರುವ ಅಪಾರ್ಟ್ ಮೆಂಟ್ ಒಳಗೆ ಹೋಗುತ್ತಿರುವುದನ್ನು ಕಾಣಬಹುದಾಗಿದೆ.
Advertisement
Advertisement
ಹೀಗೆ ಹೋಗಿ ಕೆಲವೇ ಸೆಕೆಂಡುಗಳನ್ನು ವ್ಯಕ್ತಿ ಸೈಕಲಿನೊಂದಿಗೆ ಹೊರ ಬಂದಿದ್ದಾನೆ. ಈ ವೇಳೆ ಬಾಲಕ ಮತ್ತು ಆತನ ತಾಯಿ ಕಳ್ಳನನ್ನು ಬೆನ್ನಟ್ಟಿರುವುದು ಕೂಡ ಸಿಸಿಟಿವಿ ದೃಶ್ಯದಲ್ಲಿ ನೋಡಬಹುದಾಗಿದೆ. ಪ್ರಕರಣ ಸಂಬಂಧ ಮಾತನಾಡಿದ ಡಿಸಿಪಿ ಕಾರ್ತಿಕೇಯನ್, ಕಳ್ಳನನ್ನು ಚೇಸ್ ಮಾಡುತ್ತಿರುವ ಬಾಲಕನ ಧೈರ್ಯವನ್ನು ಮೆಚ್ಚಿದೆ. ಪೊಲೀಸರು ಸೈಕಲ್ ವಾಪಸ್ ತಂದುಕೊಡುತ್ತಾರೆ ಎಂಬ ವಿಶ್ವಾಸವನ್ನು ಬಾಲಕನ ಮನಸ್ಸಿನಲ್ಲಿ ಬಿತ್ತಬೇಕು ಎಂದು ಅಂದೇ ಭಾವಿಸಿದ್ದೆ ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿಗೆ ದಶಕದ ಸಂಭ್ರಮ – ಶಾಂತಿಧಾಮಕ್ಕೆ 25 ಲಕ್ಷ ರೂ. ವಿತರಣೆ
Advertisement
Advertisement
ಈ ಹಿನ್ನೆಲೆಯಲ್ಲಿ ಮರುದಿನವೇ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದೇವೆ. ಬೇಸರದ ಸಂಗತಿ ಅಂದರೆ, ಆರೋಪಿಯ ತಂದೆಯೂ ಕೆಲ ದಿನಗಳ ಹಿಂದೆ ಸಾವನ್ನಪ್ಪಿದ್ದರು. ಬಳಿಕ ಕೆಲವರು ಆತನ ದಾರಿ ತಪ್ಪಿಸಿ ತಪ್ಪು ದಾರಿ ತುಳಿಯುವಂತೆ ಮಾಡಿದ್ದರು. ಒಟ್ಟಿನಲ್ಲಿ ಸೈಕಲ್ ಕದ್ದ ಪ್ರಕರಣ ಸಂಬಂಧ ಆರೋಪಿ ವಿರುದ್ಧ ಎಫ್‍ಐಆರ್ ದಾಖಲಿಸದೇ ಸಿಎಸ್‍ಆರ್ ದಾಖಲಿಸಿಕೊಂಡು ಆರೋಪಿಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿರುವುದಾಗಿ ಅವರು ತಿಳಿಸಿದರು. ಇದನ್ನೂ ಓದಿ: ರಾಜಧಾನಿಗೂ ಕಾಲಿಟ್ಟ ಹಿಜಬ್ ವಿವಾದ – ಹಿಜಬ್ ತೆಗೆಯುವಂತೆ ಮಕ್ಕಳಿಗೆ ಶಿಕ್ಷಕರಿಂದ ಒತ್ತಾಯ