ಶಾಲೆಯಲ್ಲಿ ಮಾವಿನ ಗೊರಟೆ ಎಸೆದಿದ್ದಕ್ಕಾಗಿ ಬಾಲಕನಿಗೆ ಚೂರಿ ಇರಿದ ಸಹಪಾಠಿ

Advertisements

ಚೆನ್ನೈ: ಮಾವಿನ ಗೊರಟೆಯನ್ನು ಶಾಲೆಯಲ್ಲಿ ಎಸೆದಿದ್ದರಿಂದ ಸಿಟ್ಟಿಗೆದ್ದ ಆತನ ಸಹಪಾಠಿಯೇ ಚಾಕುವಿನಿಂದ ಬಾಲಕನನ್ನು ಇರಿದ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕಾವೇರಿಪಟ್ಟಣಂ ಬಳಿಯ ಶಾಲೆಯೊಳಗೆ ನಡೆದಿದೆ.

Advertisements

ಬನ್ನಿಹಳ್ಳಿ ಗ್ರಾಮದ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಬಾಲಕನೊಬ್ಬ ತನ್ನ ಸ್ನೇಹಿತನೊಂದಿಗೆ ಆಟವಾಡುತ್ತಿದ್ದ. ಆ ಸಂದರ್ಭದಲ್ಲ್ಲಿ ಆತ ಮಾವಿನ ಗೊರಟೆಯನ್ನು ಎಸೆದಿದ್ದಾನೆ. ಇದರಿಂದಾಗಿ ಆತನಿಗೆ ಹಾಗೂ ಬಾಲಕನ ಸಹಪಾಠಿಯ ನಡುವೆ ಜಗಳ ಪ್ರಾರಂಭವಾಗಿದೆ. ಗೊರಟೆ ಎಸದಿದ್ದ ಬಾಲಕನಿಗೆ ಸಹಪಾಠಿಗಳು ಬೆದರಿಕೆಯನ್ನು ಹಾಕಿದ್ದಾರೆ.

Advertisements

ಆದರೂ ನಿಲ್ಲದ ಜಗಳ ವಿಕೋಪಕ್ಕೆ ಹೋಗಿ ಆತನ ಸಹಪಾಠಿಯೊಬ್ಬ ತನ್ನ ಜೇಬಿನಲ್ಲಿದ್ದ ಚಾಕುವನ್ನು ತೆಗೆದು ಆ ಬಾಲಕನಿಗೆ ಇರಿದಿದ್ದಾನೆ. ಇದಾದ ಬಳಿಕ ಚಾಕು ಇರಿದವರೆಲ್ಲರೂ ಭಯ ಭೀತರರಾಗಿ ಓಡಿ ಹೋಗಿದ್ದಾರೆ. ಇದನ್ನೂ ಓದಿ: ಶಿವಲಿಂಗ ಪತ್ತೆಯಾದ ಜಾಗವನ್ನು ರಕ್ಷಿಸಿ: ಸುಪ್ರೀಂ ಕೋರ್ಟ್‌

ಘಟನೆಯ ನಂತರ ಇತರ ವಿದ್ಯಾರ್ಥಿಗಳಿಗೆ ಶಿಕ್ಷಕರು ಎಚ್ಚರಿಕೆಯನ್ನು ನೀಡಿದ್ದಾರೆ. ಜೊತೆಗೆ ಬಾಲಕನ ಕುಟುಂಬಕ್ಕೂ ತಿಳಿಸಿದ್ದಾರೆ. ಬಾಲಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮದ್ಯ ಮಾರಾಟಗಾರರ ಸಮಸ್ಯೆ ನಿವಾರಣೆಗೆ ಅಗತ್ಯ ಕ್ರಮ : ಕೆ.ಗೋಪಾಲಯ್ಯ

Advertisements

Advertisements
Exit mobile version