ನವದೆಹಲಿ: ಶಿವಲಿಂಗ ಪತ್ತೆಯಾದ ಜಾಗವನ್ನು ರಕ್ಷಿಸಬೇಕು ಎಂದು ಸುಪ್ರೀಂ ಕೋರ್ಟ್ ವಾರಣಾಸಿ ಜಿಲ್ಲಾಡಳಿತಕ್ಕೆ ಸೂಚಿಸಿದೆ.
ಜ್ಞಾನವ್ಯಾಪಿ ಮಸೀದಿಯಲ್ಲಿ ಸರ್ವೆ ನಡೆಸಲು ತಡೆ ಕೋರಿ ಸಲ್ಲಿಸಿದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನ್ಯಾ. ಚಂದ್ರಚೂಡ್ ಮತ್ತು ನ್ಯಾ. ಪಿ.ಎಸ್ ನರಸಿಂಹ ಅವರಿದ್ದ ಪೀಠದಲ್ಲಿ ನಡೆಯಿತು.
Advertisement
ವಿಚಾರಣೆ ಸಂದರ್ಭದಲ್ಲಿ ಶಿವಲಿಂಗ ನಿಜವಾಗಿ ಎಲ್ಲಿ ಪತ್ತೆಯಾಗಿದೆ ಎಂದು ಕೋರ್ಟ್ ಪ್ರಶ್ನಿಸಿತು. ಇದನ್ನೂ ಓದಿ: ಶ್ರೀಲಂಕನ್ ಏರ್‌ಲೈನ್ಸ್ ಮಾರಾಟಕ್ಕೆ ಮುಂದಾದ ಸರ್ಕಾರ
Advertisement
Advertisement
ಈ ಪ್ರಶ್ನೆಗೆ ಉತ್ತರ ನೀಡಿದ ಉತ್ತರಪ್ರದೇಶ ಸರ್ಕಾರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ನಾವು ನೋಡಿಲ್ಲ ಎಂದು ಉತ್ತರಿಸಿದರು. ವರದಿಯನ್ನು ನೋಡಿ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
Advertisement
ವಿಚಾರಣೆ ನಡೆಸಿದ ಕೋರ್ಟ್, ಶಿವಲಿಂಗ ಪತ್ತೆಯಾದ ಜಾಗವನ್ನು ರಕ್ಷಿಸಬೇಕು. ನಮಾಜ್ ಮಾಡಲು ಆಗಮಿಸುವ ಮುಸ್ಲಿಮರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಕೋರ್ಟ್ ವಾರಣಾಸಿ ಜಿಲ್ಲಾಡಳಿತಕ್ಕೆ ಸೂಚಿಸಿತು. ಕೋರ್ಟ್ ವಿಚಾರಣೆಯನ್ನು ಮೇ 19ಕ್ಕೆ ಮುಂದೂಡಿದೆ.
ಸೋಮವಾರ ಏನಾಗಿತ್ತು?
ವಾರಣಾಸಿ ಕೋರ್ಟ್ ಸೂಚನೆ ಮೇರೆಗೆ ಕೋರ್ಟ್ ಕಮೀಷನರ್ ನೇತೃತ್ವದಲ್ಲಿ ಮೂರು ದಿನ ನಡೆದ ಜ್ಞಾನವ್ಯಾಪಿ ಮಸೀದಿ ವಿಡಿಯೋ ಸರ್ವೇ ಸೋಮವಾರಕ್ಕೆ ಮುಕ್ತಾಯವಾಗಿತ್ತು. ಮಸೀದಿಯ ಕೊಳದಲ್ಲಿ 12 ಅಡಿ ಎತ್ತರದ ಶಿವಲಿಂಗ ಪತ್ತೆಯಾಗಿತ್ತು. ಇದು ತಿಳಿಯುತ್ತಲೇ ಶಿವಲಿಂಗಕ್ಕೆ ರಕ್ಷಣೆ ಕಲ್ಪಿಸಬೇಕೆಂದು ಕೋರಿ ವಕೀಲರೊಬ್ಬರು ಕಾಶಿ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಶಿವಲಿಂಗ ಪತ್ತೆಯಾದ ಪ್ರದೇಶವನ್ನು ಈ ಕೂಡಲೇ ಸೀಲ್ ಮಾಡುವಂತೆ ಸ್ಥಳೀಯ ಆಡಳಿತಕ್ಕೆ ನಿರ್ದೇಶನ ನೀಡಿತ್ತು. ಅಲ್ಲದೇ, ಶಿವಲಿಂಗ ಪತ್ತೆಯಾದ ಪ್ರದೇಶಕ್ಕೆ ಯಾರು ಹೋಗದಂತೆ ನಿಷೇಧ ವಿಧಿಸುವಂತೆಯೂ ಆದೇಶ ನೀಡಿದೆ. ಅಗತ್ಯ ಭದ್ರತೆ ಒದಗಿಸುವಂತೆಯೂ ಸೂಚನೆ ನೀಡಿತ್ತು.
ಆದೇಶದ ಬೆನ್ನಲ್ಲೇ 30*30 ಅಳತೆಯ ಪ್ರದೇಶವನ್ನು ಸೀಲ್ ಮಾಡಲಾಗಿದೆ. ಆ ಪ್ರದೇಶದ ಮೂರು ದ್ವಾರಗಳನ್ನು ಬಂದ್ ಮಾಡಲಾಗಿದೆ. ಈ ಕೊಳದ ನೀರನ್ನು ಮುಸ್ಲಿಮರು ಪ್ರಾರ್ಥನೆಗೆ ಬಂದ ಸಂದರ್ಭದಲ್ಲಿ ಕೈಕಾಲು ತೊಳೆಯಲು ಬಳಸ್ತಿದ್ದರು. ಪ್ರಾರ್ಥನೆಗೆ ಬರುವವರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸಿದೆ.