ಕೊಲ್ಕತ್ತಾ: ತಾಯಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ನೊಂದ ಮಗ ಆತ್ಯಹತ್ಯೆಗೆ ಶರಣಾಗಿರುವ ಮನಕಲಕುವಂತಹ ಘಟನೆ ಪಶ್ಚಿಮ ಬಂಗಾಳದ ರಾನಘಾಟ್‍ನಲ್ಲಿ ನಡೆದಿದೆ.
9ನೇ ತರಗತಿ ಓದುತ್ತಿದ್ದ ರಿಕು ಬಿಸ್ವಾಸ್ ಎಂಬಾತನೇ ತಾಯಿ ಸಾವಿನಿಂದ ನೊಂದು ಆತ್ಯಹತ್ಯೆಗೆ ಶರಣಾದ ಮೃತ ದುರ್ದೈವಿ.
- Advertisement 2-
ಬಿಸ್ವಾಸ್‍ನ ತಾಯಿ ಅನಾರೋಗ್ಯದ ಕಾರಣದಿಂದ ಶನಿವಾರ ಬೆಳಿಗ್ಗೆ ನಾಡಿಯಾ ಜಿಲ್ಲೆಯ ಕಲ್ಯಾಣಿ ನಗರದಲ್ಲಿರುವ ಜಿಎನ್‍ಎಂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನಂತರ ತಾಯಿಯ ಸಾವಿನಿಂದ ನೊಂದ ಬಿಸ್ವಾಸ್ ಸಮೀಪದ ರಾನಘಾಟ್ ರೈಲ್ವೇ ನಿಲ್ದಾಣಕ್ಕೆ ಹೋಗಿ ಬರುತ್ತಿರುವ ರೈಲಿಗೆ ಓಡಿ ಹೋಗಿ ಜಿಗಿದು ಆತ್ಯಹತ್ಯೆಗೆ ಯತ್ನಿಸಿದ್ದಾನೆ.
- Advertisement 3-
ಘಟನೆಯಲ್ಲಿ ಗಾಯಗೊಂಡ ಬಿಸ್ವಾಸ್ ಅನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಾಯಿ ಮೃತಪಟ್ಟ ಆಸ್ಪತ್ರೆಗೆ ರವಾನಿಸಲಾಗಿದೆ. ಆದರೆ ತೀವ್ರವಾಗಿ ಗಾಯಗೊಂಡಿದ್ದ ಬಿಸ್ವಾಸ್ ಮಧ್ಯಾಹ್ನ ಸಾವನ್ನಪ್ಪಿದ ಎಂದು ಪೊಲೀಸರು ತಿಳಿಸಿದ್ದಾರೆ.
- Advertisement 4-