ಅಹಮದಾಬಾದ್: ಅಹಮದಾಬಾದ್‍ನ ರಸ್ತೆಬದಿಯಲ್ಲಿ ದಹಿ ಕಚೋರಿ ವ್ಯಾಪಾರ ಮಾಡುವ 14 ವರ್ಷದ ಬಾಲಕನ ಭಾವನಾತ್ಮಕ ಕಥೆಯ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಈ ವೀಡಿಯೋವನ್ನು ಫುಡ್ ಬ್ಲಾಗರ್ ಡೋಯಶ್ ಪತ್ರಾಬೆ ಇನ್‍ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಬಾಲಕ ಮಣಿನಗರ ರೈಲ್ವೆ ನಿಲ್ದಾಣದ ಎದುರಿಗಿರುವ ಅಂಗಡಿಯೊಂದರಲ್ಲಿ ವ್ಯಾಪಾರ ಮಾಡುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: USನಿಂದ 157 ಪುರಾತನ ಕಲಾಕೃತಿಗಳನ್ನು ವಾಪಸ್ ಭಾರತಕ್ಕೆ ತಂದ ಪ್ರಧಾನಿ ಮೋದಿ
Advertisement
Advertisement
ಬಾಲಕ ತನ್ನ ಕುಟುಂಬಕ್ಕೆ ಸಹಾಯ ಮಾಡಲು ಕಚೋರಿ ವ್ಯಾಪಾರ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ಬಾಲಕನ ಸಂಪೂರ್ಣ ಕಥೆ ಕೇಳಿ ಡೊಯಾಶ್ ಭಾವುಕಗೊಂಡು ವೀಡಿಯೋ ಹಂಚಿಕೊಳ್ಳುವುದರ ಜೊತೆಗೆ ಬಾಲಕನಿಗೆ ಸಹಾಯ ಮಾಡುವಂತೆ ಶೀರ್ಷಿಕೆಯಲ್ಲಿ ಬರೆದು ವಿನಂತಿಸಿದ್ದಾರೆ. ಇದನ್ನೂ ಓದಿ: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ಲಾರಿ ಪಲ್ಟಿ- ಡ್ರೈವರ್ ಗ್ರೇಟ್ ಎಸ್ಕೇಪ್
Advertisement
ಅವನಿಗೆ ಸಹಾಯ ಮಾಡಿ. ಬಾಲಕ 14 ವರ್ಷ ವಯಸ್ಸಿನವನಾಗಿದ್ದು, ಗುಜರಾತ್‍ನ ಅಹಮದಾಬಾದ್‍ನ ಮಣಿನಗರ ರೈಲ್ವೆ ನಿಲ್ದಾಣದ ಎದುರು ಕೇವಲ 10ರೂ.ಗೆ ದಹಿ ಕಚೋರಿ ಮಾರುತ್ತಿದ್ದಾನೆ. ಅವನಿಗೆ ಸಹಾಯ ಮಾಡಬೇಕೆಂದು ವೀಡಿಯೋವನ್ನು ಹಂಚಿಕೊಂಡಿದ್ದೇನೆ. ಕೇವಲ 14 ವರ್ಷಕ್ಕೆ ಅವನ ಕುಟುಂಬಕ್ಕೆ ಸಹಾಯ ಮಾಡಲು ಬಾಲಕ ಶ್ರಮಿಸುತ್ತಿದ್ದಾನೆ. ಅವನ ಬಗ್ಗೆ ಹೆಮ್ಮೆಯಾಗುತ್ತಿದೆ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಬಾಲಕನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತಿದ್ದಾರೆ ಮತ್ತು ಆತನಿಗೆ ಧೈರ್ಯ ತುಂಬುತ್ತಿದ್ದಾರೆ. ಜೊತೆಗೆ ವೀಡಿಯೋವನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಧನ್ನೆಗಾಂವ್ ಜಲಾಶಯದಿಂದ ನೀರು ಬಿಡುಗಡೆ ಮಾಂಜ್ರಾ ನದಿ ದಡದಲ್ಲಿ ಪ್ರವಾಹ ಭೀತಿ