ಚೆನ್ನೈ: ನಕಲಿ ವೈದ್ಯನೊಬ್ಬ (Fake Doctor) ಚುಚ್ಚುಮದ್ದು (Injection) ನೀಡಿದ್ದರಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ 6 ವರ್ಷದ ಬಾಲಕ (Boy) ಸಾವನ್ನಪ್ಪಿರುವ ಘಟನೆ ತಮಿಳುನಾಡಿನ (Tamilnadu) ವಿರುದುನಗರದಲ್ಲಿ ನಡೆದಿದೆ.
ವರದಿಗಳ ಪ್ರಕಾರ ಬಾಲಕ ಕವಿ ದೇವನಾಥನ್‌ಗೆ ನವೆಂಬರ್ 4 ರಂದು ಅನಾರೋಗ್ಯ ಕಾಣಿಸಿಕೊಂಡಿತ್ತು. ಆತನನ್ನು ತಂದೆ ಮಹೇಶ್ವರನ್ ಸ್ಥಳೀಯವಾಗಿ ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯ ಕ್ಯಾಥರೀನ್ ಬಳಿಗೆ ಕರೆದುಕೊಂಡು ಬಂದಿದ್ದರು. ಬಾಲಕನಿಗೆ ನಕಲಿ ವೈದ್ಯ ಜ್ವರಕ್ಕಾಗಿ ಚುಚ್ಚುಮದ್ದನ್ನು ನೀಡಿದ್ದು, ಮನೆಗೆ ಹಿಂದಿರುಗಿದಾಗ ಬಾಲಕನ ಕಾಲುಗಳು ಊದಿಕೊಳ್ಳಲು ಪ್ರಾರಂಭಿಸಿತ್ತು.
ಬಳಿಕ ಬಾಲಕನನ್ನು ಮಹೇಶ್ವರನ್ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ವೈದ್ಯರು ಮಹೇಶ್ವರನ್ ಅವರ ಮನವಿಯ ಮೇರೆಗೆ ಪ್ಯಾರಸಿಟಮಾಲ್ ಚುಚ್ಚುಮದ್ದನ್ನು ನೀಡಿದರು. ಆದರೆ ಬಾಲಕನನ್ನು ಮನೆಗೆ ವಾಪಸ್ ಕರೆದುಕೊಂಡು ಹೋದಾಗ ಆತ ಕುಸಿದು ಬಿದ್ದಿದ್ದಾನೆ. ಇದನ್ನೂ ಓದಿ: ಬಾಲಕಿಯ ಗುಪ್ತಾಂಗದ ಮೇಲೆ ಮೇಣದ ಬತ್ತಿ ಇಟ್ಟು ಅತ್ಯಾಚಾರ- ಬಂಧನ ಭೀತಿಗೆ ವಿಷ ಸೇವಿಸಿದ ವೃದ್ಧ
ತಕ್ಷಣ ಬಾಲಕನನ್ನು ರಾಜಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಬಾಲಕ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಬಳಿಕ ಮಹೇಶ್ವರನ್ ಅವರು ನೀಡಿರುವ ದೂರಿನ ಆಧಾರದ ಮೇಲೆ ಆರೋಗ್ಯ ಇಲಾಖೆ ಹಾಗೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ತನಿಖಾ ತಂಡ ಕ್ಯಾಥರೀನ್‌ನ ಕ್ಲಿನಿಕ್ ಅನ್ನು ತಲುಪಿದಾಗ ಅಲ್ಲಿ ಆತ ನಕಲಿ ವೈದ್ಯ ಎಂಬುದು ತಿಳಿದುಬಂದಿದೆ. ಆತನ ಬಳಿ ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಅರ್ಹ ದಾಖಲೆಗಳು ಲಭ್ಯವಾಗಿಲ್ಲ ಎಂಬುದನ್ನು ತಿಳಿದ ಬಾಲಕನ ಕುಟುಂಬ ಆಘಾತಕ್ಕೊಳಗಾಗಿದೆ. ತನಿಖಾ ತಂಡ ಬಳಿಕ ನಕಲಿ ವೈದ್ಯನ ಕ್ಲಿನಿಕ್‌ನಲ್ಲಿದ್ದ ಹಲವಾರು ಔಷಧ ಹಾಗೂ ಚುಚ್ಚುಮದ್ದುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿ ಕ್ಯಾಥರೀನ್‌ನನ್ನು ಬಂಧಿಸಲಾಗಿದೆ. ಇದನ್ನೂ ಓದಿ: 79ರ ವೃದ್ಧನನ್ನು ನಗ್ನಗೊಳಿಸಿ ಫೋಟೋ ಕ್ಲಿಕ್ಕಿಸಿಕೊಂಡ್ಲು – ಹನಿಟ್ರ್ಯಾಪ್‍ಗೆ ಯತ್ನಿಸಿದ ಖತರ್ನಾಕ್ ಆಂಟಿ ಅರೆಸ್ಟ್