ದಾವಣಗೆರೆ: ಮಹಾನಗರ ಪಾಲಿಕೆ ಸಿಬ್ಬಂದಿಯ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿರುವ ಘಟನೆ ದಾವಣಗೆರೆಯ ಮಂಡಿಪೇಟೆ ಬಳಿ ಕಳೆದ 25ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಎಪಿ ವಂಶ್(14) ಮೃತ ಬಾಲಕ. ವಂಶ್ ದಾವಣಗೆರೆ ತಾಲೂಕಿನ ಅತ್ತಿಗೆರೆ ಗ್ರಾಮದ 9ನೇ ತರಗತಿಯಲ್ಲಿ ಓದುತ್ತಿದ್ದನು. ಚರಂಡಿ ಕಾಮಗಾರಿ ಸರಿಯಾಗಿ ನಿರ್ವಹಿಸದ ಹಿನ್ನೆಲೆ ಅಮಾಯಕ ಬಾಲಕ ಬಲಿಯಾಗಿದ್ದಾನೆ. ಚರಂಡಿಯಿಂದ ತೆಗೆದಿದ್ದ ಹೂಳಿನ ಮೇಲೆ ಕಾಲಿಟ್ಟ ಪರಿಣಾಮ ವಂಶ್ ಜಾರಿ ಬಿದ್ದು ಕಲ್ಲಿನ ಕಟ್ಟೆಗೆ ತಲೆ ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಡಿಸೆಂಬರ್ 25ರಂದು ವಂಶ್ ತನ್ನ ತಾಯಿ ಜೊತೆ ಬಟ್ಟೆ ಖರೀದಿಸಲು ಹೋಗಿದ್ದನು. ಈ ವೇಳೆ ಪೆನ್ನಿಗೆ ರಿಫೀಲ್ ತರಲು ತೆರಳುವಾಗ ಹೂಳಿನ ಮೇಲೆ ಕಾಲಿಟ್ಟಾಗ ಜಾರಿ ತೆರೆದ ಚರಂಡಿ ಕಟ್ಟೆಗೆ ತಲೆ ಬಡಿದು ಮೃತಪಟ್ಟಿದ್ದಾನೆ. ಚರಂಡಿಯಲ್ಲಿದ್ದ ಹೂಳು ತೆಗೆದು ಕಲ್ಲನ್ನು ಮುಚ್ಚದೆ ಹಾಗೆ ಬಿಟ್ಟಿದ್ದರಿಂದ ಈ ಘಟನೆ ನಡೆದಿದೆ.
ಕಾಮಗಾರಿ ನಡೆದ ಸ್ಥಳದಲ್ಲಿ ಎಚ್ಚರಿಕೆಯುಳ್ಳ ನಾಮ ಫಲಕ ಅಳವಡಿಸದೇ ಇರುವ ಕಾರಣ ಈ ಅವಘಡ ಸಂಭವಿಸಿದೆ. ವಂಶ್ ಜಾರಿ ಬೀಳುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv