ಲಕ್ನೋ: ಕೋತಿಗಳ(Monkey) ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ 5 ವರ್ಷದ ಬಾಲಕನೊಬ್ಬ(Boy) ಛಾವಣಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಉತ್ತರಪ್ರದೇಶದ(Uttar Pradesh) ಬದೌನ್ ಜಿಲ್ಲೆಯಲ್ಲಿ ನಡೆದಿದೆ.
ಬಾಲಕ ನಿಖಿಲ್ ಮನೆಯ ಛಾವಣಿ ಮೇಲೆ ಆಟವಾಡುತ್ತಿದ್ದಾಗ ಕೋತಿಗಳ ಗುಂಪೊಂದು ಆತನ ಮೇಲೆ ದಾಳಿ ನಡೆಸಲು ಮುಂದಾಗಿವೆ. ಈ ವೇಳೆ ಆತ ಅಲ್ಲಿಂದ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದಾನೆ. ಆದರೆ ಆತ ಛಾವಣಿಯಿಂದ ಬಿದ್ದಿರುವುದಾಗಿ ಬಾಲಕನ ತಂದೆ ನೆಕ್ರಮ್ ತಿಳಿಸಿದ್ದಾರೆ.
Advertisement
Advertisement
Advertisement
ಛಾವಣಿಯಿಂದ ಬಿದ್ದ ಪರಿಣಾಮ ತೀವ್ರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ರಸ್ತೆ ಬದಿಯಲ್ಲಿ ಬೆಂಕಿಗಾಹುತಿಯಾದ ಕಾರು – ಸಹಾಯಕ್ಕೆ ಧಾವಿಸಿದ ಮಹಾರಾಷ್ಟ್ರ ಸಿಎಂ
Advertisement
ಬಾಲಕ ಆಕಸ್ಮಿಕವಾಗಿ ಮನೆಯ ಛಾವಣಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಆತನ ಕುಟುಂಬದವರು ಮೃತದೇಹವನ್ನು ಶವಪರೀಕ್ಷೆಗೆ ಕಳುಹಿಸಲು ನಿರಾಕರಿಸಿದ್ದಾರೆ. ಇದು ಅಪಘಾತವಾದ್ದರಿಂದ ನಾವು ಬಲವಂತ ಮಾಡಲಿಲ್ಲ ಎಂದು ಅಲಾಪುರ್ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಸಂಜಯ್ ಸಿಂಗ್ ಹೇಳಿದ್ದಾರೆ.
ಈ ಹಿಂದೆ ಜುಲೈನಲ್ಲಿ 35 ವರ್ಷದ ಮಹಿಳೆ ಮಂಗಗಳಿಂದ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ತನ್ನ ಮನೆಯ ಛಾವಣಿಯಿಂದ ಬಿದ್ದು ಸಾವನ್ನಪ್ಪಿದ್ದರು. ಇದನ್ನೂ ಓದಿ: ಪರೀಕ್ಷೆ ನಿಲ್ಲಿಸಲು ಶಾಲೆಗೆ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿದ ವಿದ್ಯಾರ್ಥಿ