ಬಾಗಲಕೋಟೆ: ಮೂರು ವರ್ಷದ ಮಗನ ಶವದ ಜೊತೆ ನೇಣು ಬಿಗಿದ ಸ್ಥಿತಿಯಲ್ಲಿ ತಾಯಿಯ ಶವ ಪತ್ತೆಯಾಗಿರೋ ಘಟನೆ ನಗರದ ವಿದ್ಯಾಗಿರಿಯಲ್ಲಿ ನಡೆದಿದೆ.
25 ವರ್ಷದ ದೀಪಾ ಮೇಟಿ ಮೃತ ಮಹಿಳೆ. ದೀಪಾ ಅವರ ಮೂರು ವರ್ಷದ ಮಗ ಶೌರ್ಯ ಶವ ಕೂಡ ಮನೆಯಲ್ಲಿ ಪತ್ತೆಯಾಗಿದೆ. ತಾಯಿ ಮತ್ತು ಮಗುವಿನ ಸಾವಿಗೆ ಇದೂವರೆಗೂ ನಿಖರ ಕಾರಣ ತಿಳಿದುಬಂದಿಲ್ಲ.
ಮೇಲ್ನೋಟಕ್ಕೆ ಇದು ಆತ್ಮಹತ್ಯೆ ರೀತಿಯಲ್ಲಿ ಕಾಣುತ್ತಿದೆ. ಆದ್ರೆ ತಾಯಿ ಮಗುವನ್ನು ನೀರಲ್ಲಿ ಮುಳುಗಿಸಿ ಹತ್ಯೆ ಮಾಡಿರುವ ಶಂಕೆಯಿದೆ. ಶವ ಪರೀಕ್ಷೆಯ ನಂತರವಷ್ಟೆ ಸಾವಿನ ಸತ್ಯಾಸತ್ಯತೆ ತಿಳಿಯಲಿದೆ ಎಂದು ಎಸ್‍ಪಿ ರಿಷ್ಯಂತ್ ತಿಳಿಸಿದ್ದಾರೆ.
ಈ ಸಂಬಂಧ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.