ಚಂಡೀಗಢ: ಗುರುಗ್ರಾಮ್‍ನ ನೈಟ್‍ಕ್ಲಬ್ ಹೊರಗೆ ತಡರಾತ್ರಿ ಗ್ರಾಹಕ ಮತ್ತು ಯುವತಿಗೆ ಥಳಿಸಿದ ಆರೋಪದಡಿ ಆರು ಮಂದಿ ಬೌನ್ಸರ್ಸ್‌ಗಳು ಮತ್ತು ಕ್ಲಬ್‍ನ ಮ್ಯಾನೇಜರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಬೌನ್ಸರ್ಸ್‌ಗಳಲ್ಲಿ ಓರ್ವ ತಮ್ಮ ಗ್ಯಾಂಗ್‍ನಲ್ಲಿದ್ದ ಯುವತಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ವ್ಯಕ್ತಿ ಆರೋಪಿಸಿದ್ದಾರೆ. ಇದೀಗ ವ್ಯಕ್ತಿ ಮತ್ತು ಯುವತಿ ಮೇಲೆ ಬೌನ್ಸರ್ಸ್‌ಗಳು ಹಲ್ಲೆ ನಡೆಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಪೊಲೀಸ್ ಮೆಸ್ ಊಟ ಚೆನ್ನಾಗಿಲ್ಲ- ರಸ್ತೆಯಲ್ಲಿ ಊಟದ ತಟ್ಟೆ ಹಿಡಿದು ಅತ್ತ ಕಾನ್‍ಸ್ಟೇಬಲ್
Advertisement
Advertisement
ವೀಡಿಯೋದಲ್ಲಿ ಬೌನ್ಸರ್ಸ್‌ಗಳು ವ್ಯಕ್ತಿಯನ್ನು ಎಳೆದಾಡಿಕೊಂಡು ಹೊಡೆಯುತ್ತಿರುತ್ತಾರೆ. ಈ ವೇಳೆ ವ್ಯಕ್ತಿಯನ್ನು ರಕ್ಷಿಸಲು ಬಂದ ಯುವತಿಯನ್ನು ತಳ್ಳಿದ್ದಾರೆ. ಈ ವೀಡಿಯೋವನ್ನು ಸೆರೆಹಿಡಿಯುತ್ತಿದ್ದ ಮತ್ತೋರ್ವ ಯುವತಿ ಆತನಿಗೆ ರಕ್ತ ಬರುತ್ತಿದೆ, ದಯವಿಟ್ಟು ಹೊಡೆಯುವುದನ್ನು ನಿಲ್ಲಿಸಿ ಎಂದು ಅಳುತ್ತಾ ಕೇಳಿಕೊಳ್ಳುತ್ತಿರುತ್ತಾಳೆ. ಆದರೂ ಬೌನ್ಸರ್ಸ್‌ಗಳು ನಿಲ್ಲಿಸದೇ ವ್ಯಕ್ತಿಗೆ ಕಪಾಳ ಮೋಕ್ಷ ಮಾಡುತ್ತಾ, ಗುದ್ದಿರುವುದನ್ನು ಕಾಣಬಹುದಾಗಿದೆ.
Advertisement
Gurugram, Haryana | A man, who went with his friends to Club Casa Danza in Udyog Vihar on the intervening night of Aug 7-8 was beaten by several bodyguards after one of them allegedly molested a female friend in their group.
(Vid source: Complainant)
(Note- Abusive language) pic.twitter.com/APAn2SNyCd
— ANI (@ANI) August 10, 2022
Advertisement
ಮತ್ತೊಂದು ವೀಡಿಯೋದಲ್ಲಿ ಬೌನ್ಸರ್ಸ್‌ಗಳಲ್ಲಿ ಒಬ್ಬ ಕೋಲಿನಿಂದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇತರೆ ವ್ಯಕ್ತಿಗಳು ಮತ್ತು ಯುವತಿರು ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಬೌನ್ಸರ್ಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಿದ್ದರಿಂದ ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಪ್ರವೀಣ್ ಕುಮಾರ್ ನೆಟ್ಟಾರು ಹತ್ಯೆ ಪ್ರಕರಣ – ಪ್ರಮುಖ ಮೂವರು ಆರೋಪಿಗಳ ಬಂಧನ
ನಗರದ ಉದ್ಯೋಗ್ ವಿಹಾರ್ ಪ್ರದೇಶದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಬೌನ್ಸರ್ಸ್‌ಗಳು ಸೇರಿದಂತೆ ಕ್ಲಬ್ ಸಿಬ್ಬಂದಿ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಎಫ್‍ಐಆರ್‌ನಲ್ಲಿ ಹಲ್ಲೆಗೊಳಗಾದ ವ್ಯಕ್ತಿಗಳಲ್ಲಿ ಒಬ್ಬರು ಐಟಿ ಕಂಪನಿ ಉದ್ಯೋಗಿ ಎಂದು ತಿಳಿದುಬಂದಿದೆ. ವ್ಯಕ್ತಿ ಕ್ಲಬ್‍ಗೆ ಪ್ರವೇಶಿಸುವಾಗ ಬೌನ್ಸರ್ ಓರ್ವ ತಮ್ಮ ಗುಂಪಿನಲ್ಲಿದ್ದ ಯುವತಿಯರಲ್ಲಿ ಒಬ್ಬರನ್ನು ಅನುಚಿತವಾಗಿ ಸ್ಪರ್ಶಿಸಿದನು ಎಂದು ಆರೋಪಿಸಿದ್ದಾರೆ. ನಂತರ ಹೊರಬಂದ ಮ್ಯಾನೇಜರ್ ಅವರನ್ನು ಹೊಡೆದು ಹೊರಗೆ ಹಾಕಿ ಅಂತ ಬೌನ್ಸರ್ಸ್‌ಗಗಳಿಗೆ ಹೇಳಿದ್ದಾನೆ ಎಂದು ಕಿಡಿಕಾರಿದ್ದಾರೆ.
ಘಟನೆ ನಂತರ ಹಲ್ಲೆಗೊಳಗಾದ ವ್ಯಕ್ತಿಯನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಲ್ಲೆ ವೇಳೆ ಬೌನ್ಸರ್ಸ್‌ಗಳು ಒಬ್ಬರಿಂದ ವಾಚ್ ಮತ್ತು ಸುಮಾರು 10,000 ರೂಪಾಯಿ ಕಿತ್ತುಕೊಂಡಿದ್ದಾರೆ ಎಂದು ಹೇಳಾಗುತ್ತಿದೆ. ಈ ಹಿಂಸಾಚಾರವನ್ನು ಕ್ಲಬ್ ಖಂಡಿಸಿದ್ದು, ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಿದೆ. ಆದರೆ ಕಿರುಕುಳ ನೀಡಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದೆ.