ಬೆಂಗಳೂರು: ಇತ್ತೀಚಿಗೆ ಸಿಲಿಕಾನ್ ಸಿಟಿಯಲ್ಲಿ ಹೆಲ್ಮೆಟ್ ಕಳ್ಳರ ಕೈಚಳಕ ಜಾಸ್ತಿಯಾಗಿದ್ದು ಈಗ ಬೌನ್ಸ್ ಕಂಪನಿ ಹೆಲ್ಮೆಟ್ ಕಳ್ಳರ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದೆ.
ಈ ವಿಚಾರವಾಗಿ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಬೌನ್ಸ್ ಕಂಪನಿಯ ನಿರ್ದೇಶಕ ನಿಶ್ಚಯ್ ಅವರು, ನಾವು ಬೈಕ್ ಜೊತೆ ಹೆಲ್ಮೆಟ್ ಕೊಡಲೇ ಬೇಕು ಎಂಬ ನಿಯಮ ಇಲ್ಲ. ಆದರೆ ನಾವು ನಮ್ಮ ಗ್ರಾಹಕರ ಸುರಕ್ಷತೆಗೆಂದು ನೀಡುತ್ತೇವೆ. ಆದರೆ ಕೆಲವರು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಾವು ಇದನ್ನು ತಡೆಗಟ್ಟಲು ಹೆಲ್ಮೆಟ್‍ನಲ್ಲಿ ಸೆನ್ಸರ್ ಫಿಕ್ಸ್ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
Advertisement
Advertisement
ನಮ್ಮ ಗ್ರಾಹಕರಲ್ಲಿ ಎಲ್ಲರೂ ಈ ರೀತಿ ಕಳ್ಳತನ ಮಾಡುವುದಿಲ್ಲ ಆದರೆ ಕೆಲ ಜನರಿದ್ದಾರೆ ಅವರು ಈ ರೀತಿ ಮಾಡುತ್ತಾರೆ. ಒಬ್ಬರು ಈ ರೀತಿ ಕಳ್ಳತನ ಮಾಡಿದರೆ ಆ ಗಾಡಿಯನ್ನು ನಂತರ ಓಡಿಸುವ ಗ್ರಾಹಕರಿಗೆ ತೊಂದರೆಯಾಗುತ್ತದೆ. ನಾವು ಈ ವಿಚಾರದ ಬಗ್ಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಜೊತೆ ಮಾತನಾಡಿದ್ದೇವೆ. ಹೆಲ್ಮೆಟ್ ಅನ್ನು ಕಳ್ಳತನ ಮಾಡುವವರಿಗೆ ಮತ್ತು ನಾವು ಹೋಗಿ ಕೇಳಿದಾಗ ವಾಪಸ್ ನೀಡದವರ ವಿರುದ್ಧ ನಾವು ನೇರವಾಗಿ ಎಫ್‍ಐಆರ್ ದಾಖಲಿಸಬಹುದಾಗಿದೆ ಎಂದು ನಿಶ್ಚಯ್ ಹೇಳಿದ್ದಾರೆ. ಇದನ್ನು ಓದಿ: ಟ್ರಾಫಿಕ್ ಫೈನ್ ತಪ್ಪಿಸಿಕೊಳ್ಳೋಕೆ ಹೆಲ್ಮೆಟ್ ಜೊತೆಗೆ ಮಿರರ್, ವ್ಹೀಲ್‍ಗೂ ಕನ್ನ
Advertisement
Advertisement
ಬೆಂಗಳೂರಿನಲ್ಲಿ ಸುಮಾರು 10 ಸಾವಿರ ಖಾಸಗಿ ದ್ವಿಚಕ್ರ ವಾಹನಗಳು ಬಾಡಿಗೆಗೆ ಸಿಗುತ್ತಿವೆ. ಕಿ.ಮೀಗೆ 4 ರಿಂದ 6 ರೂ. ಗೆ ಈ ವಾಹನಗಳು ಸಿಗುತ್ತಿವೆ. ಇದನ್ನ ಬಳಸಿಕೊಂಡು ಹಾಗೇ ಬೈಕ್ ಬಿಟ್ಟರೆ ಸಮಸ್ಯೆಯಾಗಲ್ಲ. ಆದರೆ ಹಲವರು ಉಂಡು ಹೋದ ಕೊಂಡು ಹೋದ ಎಂಬಂತೆ ಮೊದಲು ಹೆಲ್ಮೆಟ್, ಮಿರರ್, ವ್ಹೀಲ್‍ಗಳನ್ನೂ ಎಗರಿಸ್ತಾರೆ. ಇದನ್ನು ಚಿಲ್ಲರೆಗೆ ಕದ್ದು ಚಿಲ್ಲರೆ ದುಡ್ಡಿಗೆ ಮಾರಾಟ ಮಾಡುತ್ತಿದ್ದಾರೆ.