ಲಾಕ್‍ಡೌನ್‍ನಿಂದ ಎಲ್ಲರೂ ಮನೆಯಲ್ಲಿದ್ದೀರಿ. ಅದರಲ್ಲೂ ಇಂದು ಭಾನುವಾರ ಹೀಗಾಗಿ ಅನೇಕರು ಮನೆಯಲ್ಲಿ ಚಿಕನ್, ಮಟನ್ ಅಡುಗೆ ಮಾಡುತ್ತೀರಿ. ಆದರೆ ಯಾವಾಗಲೂ ಚಿಕನ್ ಬಿರಿಯಾನಿ, ಕಬಾಬ್, ಚಾಪ್ಸ್, ಮಟನ್ ಇದೇ ಅಡುಗೆ ಮಾಡುತ್ತೀರ. ಈಗ ತುಂಬಾ ಸಮಯವಿದೆ. ಇತ್ತ ಸರ್ಕಾರ ಮಟನ್, ಚಿಕನ್ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿದೆ. ಹೀಗಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಬೋಟಿ ತೆಗೆದುಕೊಂಡು ಬನ್ನಿ. ಸುಲಭವಾಗಿ ಬೋಟಿ ಗೊಜ್ಜು ಮಾಡುವ ವಿಧಾನ ಇಲ್ಲದೆ…
Advertisement
ಬೇಕಾಗುವ ಸಾಮಾಗ್ರಿಗಳು
1. ಬೋಟಿ – 1 ಸೆಟ್
2. ಕಡಲೆಕಾಳು – 100 ಗ್ರಾಂ
3. ಕಾಯಿ ತುರಿ – 1/2 ಬಟ್ಟಲು
4. ಈರುಳ್ಳಿ – 2
5. ಟೊಮೆಟೊ – 1 ಮೀಡಿಯಂ
6. ಶುಂಠಿ – ಅರ್ಧ ಇಂಚು
7. ಬೆಳ್ಳುಳ್ಳಿ – 7-8 ಎಸಳು
8. ದನಿಯಾ ಪುಡಿ – 1 ಚಮಚ
9. ಚಕ್ಕೆ, ಲವಂಗ – 3-4
10. ಕೆಂಪು ಒಣಮೆಣಸಿನಕಾಯಿ – 5-6
11. ಕೊತ್ತಂಬರಿ ಸೊಪ್ಪು – ಸ್ವಲ್ಪ
12. ಹುರಿಗಡಲೆ – 3 ಚಮಚ
13. ಎಣ್ಣೆ – 3-4 ಚಮಚ
14. ಉಪ್ಪು – ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ
* ಕಡಲೆಕಾಳನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಯಲು ಬಿಡಿ.
* ಮಾಂಸದಂಗಡಿಯಿಂದ ತಂದ ಬೋಟಿಯನ್ನು ಚೆನ್ನಾಗಿ ಬಿಸಿನೀರು, ಸುಣ್ಣವನ್ನು ಸೇರಿಸಿ ಸ್ವಚ್ಛ ಮಾಡಿಕೊಳ್ಳಿ.
* ಬಳಿಕ ಬೋಟಿಯನ್ನು ಸಣ್ಣದಾಗಿ ಕಟ್ ಮಾಡಿಕೊಂಡು ಮತ್ತೆ ಚೆನ್ನಾಗಿ ಬಿಸಿ ನೀರಿನಲ್ಲಿ ತೊಳೆದು ನೀರಿಲ್ಲದಂತೆ ಹಿಂಡಿ.
* ಈಗ ಒಂದು ಪ್ಯಾನ್‍ಗೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಚಕ್ಕೆ ಲವಂಗ, ಕೆಂಪು ಒಣಮೆಣಸಿನಕಾಯಿ ಎಲ್ಲಾವನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
* ಈಗ ಮಿಕ್ಸಿ ಜಾರ್‌ಗೆ ಕಾಯಿತುರಿ, ಟೊಮೆಟೋ, ಹುರಿಗಡಲೆ, ಫ್ರೈ ಮಾಡಿದ್ದ ಮಿಶ್ರಣ, ದನಿಯಾ ಪುಡಿಯನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
* ಅಗತ್ಯ ನೀರನ್ನು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
* ಈಗ ಒಂದು ಅಗಲವಾದ ಪಾತ್ರೆಯನ್ನು ಸ್ಟೌ ಮೇಲಿಟ್ಟು ನೀರನ್ನು ಬಿಸಿಗಿಡಿ.
* ನೀರು ಕುದಿ ಬಂದ ಮೇಲೆ ನೆನೆಸಿದ್ದ ಕಡಲೆಕಾಳನ್ನು ತೊಳೆದು ಹಾಕಿ.
Advertisement
* 5 ನಿಮಿಷ ಬಳಿಕ ತೊಳೆದು ಸಣ್ಣಗೆ ಹೆಚ್ಚಿದ್ದ ಬೋಟಿಯನ್ನು ಸೇರಿಸಿ. ಕುದಿಸಿ.
* 5-10 ನಿಮಿಷಗಳ ಕಾಲ ಕಾಳು, ಬೋಟಿ ಬೆಂದ ಮೇಲೆ ಅದಕ್ಕೆ ರುಬ್ಬಿದ ಖಾರದ ಮಿಶ್ರಣ, ಉಪ್ಪು ಸೇರಿಸಿ.
* ಬಳಿಕ ಅದಕ್ಕೆ ಸಣ್ಣಗೆ ಹೆಚ್ಚಿದ ಕಾಯಿ ಚೂರುಗಳನ್ನು ಸೇರಿಸಿ.
* 15-20 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ.
* ಗೊಜ್ಜನ್ನು ಆರಿದ ಮೇಲೆ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಒಮ್ಮೆ ತಿರುಗಿಸಿ ತಟ್ಟೆ ಮುಚ್ಚಿ. (ಗೊಜ್ಜಿಗೆ ನಿಂಬೆಹಣ್ಣಿನ ರಸವನ್ನು ಸಹ ಹಿಂಡಬಹುದು)