ಬೆಂಗಳೂರು: ಕಾಕ್ರೋಚ್ ಜನತಾ ಪಾರ್ಟಿ ಮತ್ತು ಕಾಂಗ್ರೆಸ್ ಎರಡೂ ಒಂದೇ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಥಣಿಸಂದ್ರದ (Thanisandra) ಟ್ರಾಫಿಕ್ ಪಾರ್ಕ್ ಗುದ್ದಲಿ ಪೂಜೆ ಕಾರ್ಯಕ್ರಮ ಹಾಗು ಟ್ರಾಫಿಕ್ ಪೊಲೀಸರ ಬೈಕ್ ವಿತರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನ ಉದ್ದೇಶಿಸಿ ಮಾತನಾಡಿದರು. ಈ ವೇಳೆ ಮಾತನಾಡುತ್ತಾ, ಕಾಕ್ರೋಚ್ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ ಒಂದೇ ಎಂದು ಹೇಳಿದ್ದಾರೆ. ಇದನ್ನೂ ಓದಿ:ಹೆಚ್ಡಿಕೆಯಿಂದ ಸ್ಟಿಂಗ್ ಆಪರೇಷನ್ ರೂವಾರಿ, ರೌಡಿಶೀಟರ್ ಫೋಟೋ ರಿಲೀಸ್
ವಿಧ್ಯಾರ್ಥಿಗಳಿಗೆ ನೀವೆಲ್ಲ ಜೆನ್ಝೀಗಳಾ? ಎಲ್ಲರೂ ಸಿಜೆಪಿಯನ್ನು ಫಾಲೋ ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ. ಆಗ ಅಲ್ಲಿದ್ದ ವಿದ್ಯಾರ್ಥಿಗಳು ಕೂಡ ಹೌದು ಎಂದಿದ್ದಾರೆ.
ನೀವೆಲ್ಲಾ ಕಾಂಗ್ರೆಸ್ ಪಾರ್ಟಿನಾ ಅಥವಾ ಕಾಕ್ರೋಚ್ ಜನತಾ ಪಾರ್ಟಿನಾ ಅಂತಾ ಕೇಳಿದ್ದಾರೆ. ಅದಕ್ಕೆ ಅಲ್ಲಿದ್ದವರು ಕಾಕ್ರೋಚ್ ಜನತಾ ಪಾರ್ಟಿನಾ ಮತ್ತು ಕಾಂಗ್ರೆಸ್ ಎಂದು ಕೂಗಿದರು. ಆಗ ಗೃಹ ಸಚಿವರು, ಅರ್ಧ ಜನ ಕಾಂಗ್ರೆಸ್ ಅಂದ್ರು, ಅರ್ಧ ಜನ ಸಿಜೆಪಿ ಎಂದಿದ್ದಾರೆ ಎಂದು ಹೇಳಿ, ಎರಡೂ ಒಂದೇ ಬಿಡಿ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಸ್ಟಿಂಗ್ ಆಪರೇಷನ್ ರುವಾರಿಯ ಬಂಧನ ಆಗ್ಲೇಬೇಕು – 2 ದಿನಗಳ ಡೆಡ್ಲೈನ್ ಕೊಟ್ಟ ಹೆಚ್ಡಿಕೆ

