ರಾಯಚೂರು: ಸರ್ಕಾರದಿಂದ ನಿರ್ದೇಶನ ಇದ್ದರೂ ಸಹ ಕೆಲವರು ಮಿಸ್ ಲೀಡ್ ಮಾಡ್ತಿದ್ದಾರೆ. ಅಂತಹವರ ವಿರುದ್ಧ ಕ್ರಮವಾಗುತ್ತದೆ ಎಂದು ಸಣ್ಣನೀರಾವರಿ ಸಚಿವ ಎನ್.ಎಸ್.ಬೋಸರಾಜು(N S Bosaraju) ಕಲಬುರಗಿಯಲ್ಲಿ(Kalaburagi) ನೀಟ್ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಯ ಜನಿವಾರ ತೆಗೆಸಿದ ಪ್ರಕರಣಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ರಾಯಚೂರಿನಲ್ಲಿ ಮಾತನಾಡಿದ ಅವರು ಅಂತಹವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ. ತಕ್ಷಣ ಜನಿವಾರ ತೆಗೆಸಿದವರ ಮೇಲೆ ಕ್ರಮ ತೆಗದುಕೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: ನೀಟ್ ಪರೀಕ್ಷೆ ಜನಿವಾರ ಕೇಸ್ – ಇಬ್ಬರು ಪರೀಕ್ಷಾ ಸಿಬ್ಬಂದಿ ವಿರುದ್ಧ ಎಫ್‌ಐಆರ್
ಇನ್ನೂ ಹಾಲ್ ಟಿಕೆಟ್‌ನಲ್ಲಿ ಧಾರ್ಮಿಕ ಚಿಹ್ನೆ ಇರುವಂತ ಯಾವ ವಸ್ತು ಇಟ್ಟುಕೊಂಡು ಪರೀಕ್ಷೆಗೆ ಹೊಗಬಾರದು ಎಂಬ ಸೂಚನೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅದು ರಾಜ್ಯ ಸರ್ಕಾರ ಸೂಚನೆ ಅಲ್ಲ. ಕೇಂದ್ರ ಸರ್ಕಾರದ ಸೂಚನೆ. ಹೀಗಾಗಿ ಕೇಂದ್ರ ಸಚಿವರಾದ ವಿ.ಸೋಮಣ್ಣ(V Somanna) ಅದನ್ನ ಹೇಳಿದ್ದಾರೆ. ಮಂಗಳಸೂತ್ರ ಹಾಗೂ ಜನಿವಾರ ತೆಗೆಯಬಾರದು ಎಂದು ಹೇಳಿದ್ದಾರೆ. ಅದೆಲ್ಲಾ ಕೇಂದ್ರ ಸರ್ಕಾರದ ಸೂಚನೆಗಳು ರಾಜ್ಯ ಸರ್ಕಾರದ್ದು ಅಲ್ಲ. ಅದಕ್ಕೆ ಕೇಂದ್ರ ಸರ್ಕಾರ ಉತ್ತರ ಕೊಡಬೇಕು ಎಂದರು.