ಚಿತ್ರದುರ್ಗ: ಹೊಸದಾಗಿ ಕೊರೆದ ಕೊಳವೆ ಬಾವಿಯಲ್ಲಿ ಅಚ್ಚರಿ ಎಂಬಂತೆ ಆಗಸದೆತ್ತರಕ್ಕೆ ಜಲಧಾರೆ ಉಕ್ಕಿ ಹರಿದಿರುವ ಘಟನೆ ಜಿಲ್ಲೆಯ ಹಿರಿಯೂರು ತಾಲೂಕಿನ ಮೂಡ್ಲಹಟ್ಟಿ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯಲ್ಲಿ ಅಂತರ್ಜಲ ಬರಿದಾಗುತ್ತಿರುವ ಸಂರ್ಭದಲ್ಲೇ ಸಾವಿರಾರು ಅಡಿಗಳಷ್ಟು ಭೂಮಿಯನ್ನು ಕೊರೆದರು ನೀರು ಸಿಗದ ಗ್ರಾಮದಲ್ಲಿ ಅಚ್ಚರಿ ಘಟನೆ ನಡೆದಿದೆ. ಸುಮಾರು 15 ಅಡಿ ಎತ್ತರಕ್ಕೆ ಚಿಮ್ಮಿದ ನೀರು ಕಂಡು ಗ್ರಾಮಸ್ಥರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
Advertisement
ಮೂಡ್ಲಹಟ್ಟಿಯ ಈರಣ್ಣ ಜಮೀನಿನಲ್ಲಿ ನೀರು ಚಿಮ್ಮಿದ್ದು, 450 ಅಡಿ ಆಳಕ್ಕೆ ಕೊರೆದ ಕೊಳವೆಬಾವಿಯಲ್ಲಿ ಮೊದಲು ಎರಡು ಇಂಚು ಕಾಣಿಸಿಕೊಂಡಿತ್ತು. ಆ ಬಳಿಕ ಕೊಳವೆಬಾವಿಯಿಂದ ದಿಡೀರ್ ಎಂದು ನೀರು ಉಕ್ಕಿದೆ. ನೀರು ಉಕ್ಕಿ ಹರಿಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನು ಓದಿ: ಗುಮ್ಮಟ ನಗರಿಯಲ್ಲಿ ಗಂಗೆಯ ಪವಾಡ- ಬರಗಾಲದಲ್ಲೂ ಉಕ್ಕಿ ಬಂದ ಜೀವಜಲ