ಚಂಡೀಗಢ: ಪಾಕಿಸ್ತಾನದಿಂದ ಡ್ರೋನ್ ಮೂಲಕ ಹೆರಾಯಿನ್ ಹೊತ್ತು ಬರುತ್ತಿದ್ದ ಮತ್ತೊಂದು ಡ್ರೋನ್‍ನನ್ನು ಗಡಿ ಭದ್ರತಾ ಪಡೆ (ಬಿಎಸ್‍ಎಫ್) ಸಿಬ್ಬಂದಿ ಪಂಜಾಬ್‍ನ ಅಮೃತಸರದ ಅಂತರಾಷ್ಟ್ರೀಯ ಗಡಿಯಲ್ಲಿ ಹೊಡೆದುರುಳಿಸಿದ್ದಾರೆ.
ಡ್ರೋನ್ ಮೂಲಕ ಮಾದಕ ವಸ್ತುಗಳನ್ನು ಕಳ್ಳಸಾಗಣಿಕೆ ಮಾಡುತ್ತಿದ್ದ ಪಾಕಿಸ್ತಾನದ ಮತ್ತೊಂದು ಯತ್ನವನ್ನು ಗಡಿ ಭದ್ರತಾ ಪಡೆ ವಿಫಲಗೊಳಿಸಿದ್ದಾರೆ. ಪಾಕಿಸ್ತಾನದಿಂದ ಬರುತ್ತಿದ್ದ ಡ್ರೋನ್‍ನನ್ನು ಗಮನಿಸಿದ ಬಿಎಸ್‍ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಇದರಿಂದ ಡ್ರೋನ್ ಕೆಳಗೆ ಬಿದ್ದಿದ್ದು, ಡ್ರೋನ್‍ನಲ್ಲಿ 10 ಕಿಲೋಗ್ರಾಂಗಳಷ್ಟು ಹೆರಾಯಿನ್ ಪತ್ತೆಯಾಗಿದೆ ಎಂದು ಗಡಿ ಭದ್ರತಾ ಪಡೆ ತಿಳಿಸಿದೆ. ಇದನ್ನೂ ಓದಿ: ಮುಹೂರ್ತದ ವೇಳೆ ಕರೆಂಟ್ ಕಟ್ – ಅಕ್ಕನ ಗಂಡ ತಂಗಿಗೆ, ತಂಗಿ ಗಂಡ ಅಕ್ಕನಿಗೆ
Advertisement
BSF troops foiled another smuggling attempt through Pakistan drone. Vigilant BSF troops fired at the drone coming from Pakistan & brought it down. The drone was carrying 9 packets: BSF Punjab Frontier pic.twitter.com/a0qLmnw4fd
— ANI (@ANI) May 9, 2022
Advertisement
ಸೋಮವಾರ ರಾತ್ರಿ 11.15ರ ಸುಮಾರಿಗೆ ನಮ್ಮ ಸೈನಿಕರು ಗಡಿ ಬೇಲಿಯ ಮೇಲೆ ಡ್ರೋನ್ ಹಾರುತ್ತಿರುವ ಶಬ್ಧವನ್ನು ಕೇಳಿಸಿಕೊಂಡಿದ್ದಾರೆ. ನಂತರ ಡ್ರೋನ್ ಕಡೆಗೆ 9 ಗುಂಡುಗಳನ್ನು ಹಾರಿಸಿದ್ದಾರೆ. ಬಳಿಕ ಡ್ರೋನ್‍ನಲ್ಲಿದ್ದ ಸುಮಾರು 10 ಕೆಜಿ ಹೆರಾಯಿನ್ ವಶಪಡಿಸಿಕೊಂಡಿದ್ದೇವೆ ಎಂದು ಅಮೃತಸರ ಬಿಎಸ್‍ಎಫ್ ಡಿಐಜಿ ಭೂಪೇಂದರ್ ಸಿಂಗ್ ಹೇಳಿದ್ದಾರೆ. ಇದನ್ನೂ ಓದಿ: ಪ್ರಯಾಣಿಕರು ರಾತ್ರಿ ಮೊಬೈಲ್‍ನಲ್ಲಿ ಗಟ್ಟಿಯಾಗಿ ಮಾತನಾಡುವಂತಿಲ್ಲ: ಭಾರತೀಯ ರೈಲ್ವೆ