ಬೂಸ್ಟರ್‌ ಡೋಸ್‌ ಪಡೆಯಲು 60 ವರ್ಷ ಮೇಲ್ಪಟ್ಟವರಿಗೆ ಹೊಸ ಮಾರ್ಗಸೂಚಿ

Advertisements

ನವದೆಹಲಿ: 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ನೀಡುವ ಸಂಬಂಧ ಹೊಸ ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರದ ಹೊರಡಿಸಿದೆ.

Advertisements

ಬೂಸ್ಟರ್‌ ಡೋಸ್‌ ಪಡೆಯಲು ವೈದ್ಯರ ಚೀಟಿ ಅಗತ್ಯವಿಲ್ಲ. ಮೆಡಿಕಲ್‌ ಸರ್ಟಿಫಿಕೇಟ್‌ ಅಪ್ಲೋಡ್‌ ಮಾಡುವ ಅಗತ್ಯವೂ ಇಲ್ಲ. 60 ವರ್ಷ ಮೇಲ್ಪಟ್ಟ ಬಹುರೋಗ ಪೀಡಿತರು ವ್ಯಾಕ್ಸಿನ್‌ ಪಡೆಯಬಹುದು ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ. ಇದನ್ನೂ ಓದಿ: 15 ರಿಂದ 18 ವರ್ಷದವರು ಜ. 1ರಿಂದ ಕೋವಿನ್‌ನಲ್ಲಿ ಲಸಿಕೆಗೆ ಹೆಸರು ನೋಂದಾಯಿಸಬಹುದು

Advertisements

15ರಿಂದ 18 ವರ್ಷ ವಯಸ್ಸಿನವರಿಗೆ 2022ರ ಜನವರಿ 3ರಂದು ಲಸಿಕೆಗಳನ್ನು ನೀಡಲು ಪ್ರಾರಂಭಿಸಲಾಗುವುದು. 60 ವರ್ಷ ಮೇಲ್ಪಟ್ಟವರು ಜನವರಿ 10ರಿಂದ ವೈದ್ಯರ ಶಿಫಾರಸಿನ ಮೇರೆಗೆ ಬೂಸ್ಟರ್ ಡೋಸ್ ಕೂಡಾ ಪಡೆಯಬಹುದು ಎಂದು ತಿಳಿಸಲಾಗಿದೆ.

ದೇಶದಲ್ಲಿ 18 ವರ್ಷ ಮೇಲ್ಪಟ್ಟ ಜನಸಂಖ್ಯೆಯಲ್ಲಿ 61% ಜನರು ಎರಡು ಡೋಸ್ ಪಡೆದಿದ್ದಾರೆ ಹಾಗೂ 90% ಜನರು 1 ಡೋಸ್ ಪಡೆದಿದ್ದಾರೆ. ಇದನ್ನೂ ಓದಿ: 2 ಕೋವಿಡ್‌ ಲಸಿಕೆ, ಮೊಲ್ನುಪಿರವಿರ್‌ ಮಾತ್ರೆ ತುರ್ತು ಬಳಕೆಗೆ ಶಿಫಾರಸು

Advertisements

Advertisements
Exit mobile version