– ಮಹಾ ಕುಂಭಮೇಳದಲ್ಲಿ ಬಹಳ ಚೆನ್ನಾಗಿ ವ್ಯವಸ್ಥೆ ಆಗಿದೆ ಎಂದ ಸ್ಪೀಕರ್
ಬೆಂಗಳೂರು: ವಿಧಾನಸೌಧ (Vidhana Soudha) ಆವರಣದಲ್ಲಿ ಪುಸ್ತಕ ಮತ್ತು ಸಾಹಿತ್ಯ ಮೇಳ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ ಎಂದು ಸ್ಪೀಕರ್ ಯು.ಟಿ ಖಾದರ್ (UT Khader) ಹೇಳಿದ್ದಾರೆ.
Advertisement
ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಫೆಬ್ರವರಿ 28, ಮಾರ್ಚ್ 1 ಮತ್ತು 2 ರಂದು ವಿಧಾನಸೌಧದ ಆವರಣದಲ್ಲಿ ಪುಸ್ತಕ ಮೇಳ ಆಯೋಜನೆಯಾಗಿದೆ. ಪುಸ್ತಕ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಉದ್ಘಾಟನೆ ಮಾಡಲಿದ್ದಾರೆ. ಸಾರ್ವಜನಿಕರಿಗೆ ಮುಕ್ತ ಪ್ರವೇಶಾವಕಾಶ ಇರಲಿದೆ ಅಂದ್ರು. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ| ಸರ್ಕಾರ ಬದುಕಿದ್ಯಾ.. ಸತ್ತಿದ್ಯಾ?: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Advertisement
Advertisement
ಅಲ್ಲದೇ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಪುಸ್ತಕ ಖರೀದಿ ಮಾಡಿ ಸರ್ಕಾರಿ ಕಾಲೇಜು, ಪ್ರೌಢಶಾಲೆಗಳಿಗೆ ನೀಡಲು ಅವಕಾಶ ಇದೆ. ಮಾರ್ಚ್ 3 ರಂದು ಜಂಟಿ ಅಧಿವೇಶನ ನಡೆಯಲಿದೆ. ಅಂದು ರಾಜ್ಯಪಾಲರ ಭಾಷಣ ಇರೋದ್ರಿಂದ ಮಧ್ಯಾಹ್ನದ ಬಳಿಕ ಪುಸ್ತಕ ಮೇಳಕ್ಕೆ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಒಳ್ಳೆಯ ಉದ್ದೇಶ ಇಟ್ಕೊಂಡು ಪುಸ್ತಕ ಮೇಳ ನಡೆಸಲು ವಿಧಾನಸಭಾ ಸಚಿವಾಲಯ ಉದ್ದೇಶಿಸಿದೆ. ಮೇಳಕ್ಕೆ ಬರುವ ಸಾಹಿತಿಗಳ ಆಯ್ಕೆ ವಿಚಾರದಲ್ಲಿ ಎಡ – ಬಲ ಇಲ್ಲ, ಸ್ಟ್ರೇಟ್ ಇದ್ರೆ ಆಯ್ತು. ಗೇಟಿನ ಹೊರಗೆ ಏನೇ ಇರಲಿ – ಇಲ್ಲಿಗೆ ಬರುವಾಗ ಸರಿ ಇದ್ರೆ ಆಯ್ತು ಅಂತ ತಿಳಿಸಿದರು.
Advertisement
ಇನ್ನು ಇದೇ ವೇಳೆ ಪ್ರಯಾಗರಾಜ್ ಮಹಾ ಕುಂಭಮೇಳದಲ್ಲಿ ಭಾಗಿಯಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮಹಾ ಕುಂಭಮೇಳಕ್ಕೆ ಹೋದಾಗ ಉತ್ತಮ ಅನುಭವ ಆಯ್ತು. ಬಹಳ ಚೆನ್ನಾಗಿ ವ್ಯವಸ್ಥೆ ಆಗಿದೆ. ಹಲವು ಶ್ರದ್ಧಾಕೇಂದ್ರಗಳಿಗೆ ಭೇಟಿ ಕೊಟ್ಟಿದ್ದೆ. ಒಳ್ಳೆಯ ಅನುಭವ. 144 ವರ್ಷಗಳಿಗೊಮ್ಮೆ ಆಗುವ ಕಾರ್ಯಕ್ರಮ ಎಂದು ಖಾದರ್ ಮೆಚ್ಚುಗೆ ವ್ಯಕ್ತಪಡಿಸಿದ್ರು. ಇದನ್ನೂ ಓದಿ: ಮಂಡ್ಯದಲ್ಲಿ ಇಂದಿನಿಂದ 5 ದಿನ ಫಲಪುಷ್ಪ ಪ್ರದರ್ಶನ – ಪ್ರತಿ ದಿನ ರಾತ್ರಿ 10 ಗಂಟೆವರೆಗೆ ಪ್ರವೇಶ