ಬೆಂಗ್ಳೂರಿನ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆ – ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ

Public TV
1 Min Read
Govindapura 2

ಬೆಂಗಳೂರು: ನಗರದಲ್ಲಿ (Bengaluru) ಮತ್ತೆ ಖಾಸಗಿ ಶಾಲೆಗಳಿಗೆ (School) ಬಾಂಬ್ ಬೆದರಿಕೆ ಬಂದಿದೆ. ಮೇಲ್ ಮೂಲಕ ದುಷ್ಕರ್ಮಿಗಳು ಬಾಂಬ್ ಬೆದರಿಕೆ (Bomb threat) ಹಾಕಿದ್ದಾರೆ.

ಬೆಂಗಳೂರಿನ ಗೋವಿಂದಪುರ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಗೆ ಬಾಂಬ್ ಬೆದರಿಕೆಯ ಮೇಲ್ ಬಂದಿದೆ. ಬೆಳಗ್ಗೆ 6:57ರ ಸುಮಾರಿಗೆ ದುಷ್ಕರ್ಮಿಗಳು ಮೇಲ್ ಮಾಡಿದ್ದಾರೆ. ಶಾಲೆ ಆವರಣದಲ್ಲಿರುವ ಐದು ಪೈಪ್ ಲೈನ್‌ಗಳಲ್ಲಿ ಬಾಂಬ್‌ಗಳನ್ನ ಇಡಲಾಗಿದೆ. ಮಧ್ಯಾಹ್ನ 1:30ಕ್ಕೆ ಬ್ಲಾಸ್ಟ್ ಆಗಲಿದೆ ಎಂದು ಮೇಲ್ ಮಾಡಲಾಗಿದೆ.

ಮಾಹಿತಿ ಬಂದ ಕೂಡಲೇ ಗೋವಿಂದಪುರ ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದಿಂದ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ.

ಈ ಸಂಬಂಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದು, ಬೆದರಿಕೆ ಮೇಲ್ ಕಳಿಸಿರುವ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

Share This Article