ಬೆಂಗಳೂರು: ಶುಕ್ರವಾರ ಮುಂಜಾನೆಯಿಂದ ಬೆಂಗಳೂರಿನ ಹಲವು ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್‌ಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಇಲ್ಲಿವರೆಗೆ ಬೆದರಿಕೆಗೆ ಒಳಗಾಗಿದ್ದ 9 ಶಾಲೆಗಳನ್ನು ತಪಾಸಣೆ ಮಾಡಲಾಗುತ್ತಿದೆ.
ಶುಕ್ರವಾರ ಬೆಳಗ್ಗೆ ನಗರದ ಹುಸ್ಕೂರು ಬಳಿ ಇರುವ ಎಬಿನೈಜರ್ ಇಂಟರ್‌ನ್ಯಾಷನಲ್ ಸ್ಕೂಲ್‌ಗೆ ಬೆದರಿಕೆಯ ಇ-ಮೇಲ್ ಬಂದಿತ್ತು. ಇದಾದ ಬೆನ್ನಲ್ಲೇ ಒಟ್ಟು 9 ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್‌ಗಳು ಬಂದಿವೆ.
Advertisement
Advertisement
ಎಲೆಕ್ಟ್ರಾನಿಕ್ ಸಿಟಿಯ ಎಬಿನೈಜರ್ ಇಂಟರ್‌ನ್ಯಾಷನಲ್ ಸ್ಕೂಲ್, ಗೋವಿಂದಪುರದ ಇಂಡಿಯನ್ ಸ್ಕೂಲ್, ಹೆಣ್ಣೂರಿನ ಸೇಂಟ್ ವಿನ್ಸೆನ್ಟ್ ಪೌಲ್, ಮಾರತ್ತಹಳ್ಳಿಯ ನ್ಯೂ ಅಕಾಡೆಮಿ ಸ್ಕೂಲ್, ವರ್ತೂರು ಡೆಲ್ಲಿ ಪಬ್ಲಿಕ್ ಸ್ಕೂಲ್, ಮಹದೇವಪುರದ ಗೋಪಾಲನ್ ಇಂಟರ್‌ನ್ಯಾಷನಲ್ ಸ್ಕೂಲ್, ಕೊಪ್ಪ ಬೇಗೂರು ರಸ್ತೆಯಲ್ಲಿರುವ ಕ್ಯಾಂಡಾರ್ ಸ್ಕೂಲ್ ಹಾಗೂ ರೆಡ್ ಬ್ರಿಡ್ಜ್ ಸ್ಕೂಲ್‌ಗೆ ಇಲ್ಲಿಯವರೆಗೆ ಬೆದರಿಕೆ ಇ-ಮೇಲ್‌ಗಳು ಬಂದಿವೆ. ಇದನ್ನೂ ಓದಿ: ಬೆಂಗಳೂರಿನ ಶಾಲೆಗೆ ಬಾಂಬ್ ಬೆದರಿಕೆ
Advertisement
Advertisement
ಹುಸಿ ಬಾಂಬ್ ಸಂದೇಶ:
ಇದೊಂದು ಹುಸಿ ಬಾಂಬ್‌ನ ಇ-ಮೇಲ್. ಇಲ್ಲಿಯವರೆಗೆ ಯಾವುದೇ ಅಘಾತಕಾರಿ ವಸ್ತು ಸಿಕ್ಕಿಲ್ಲ. ಬೆದರಿಕೆ ಬಂದಿರುವ ಶಾಲೆಗಳಿಗೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಎಲ್ಲಾ ಮಕ್ಕಳನ್ನು ಸುರಕ್ಷಿತ ಪ್ರದೇಶಗಳಿಗೆ ಕಳುಹಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೈಬರ್ ಮಾಹಿತಿ:
ಶಾಲೆಗಳಿಗೆ ಬಂದಿರುವ ಬೆದರಿಕೆಯ ಮೇಲ್‌ಗಳು ಹೊಸದಾಗಿ ಕ್ರಿಯೇಟ್ ಆಗಿರುವ ಮೇಲ್ ಐಡಿ ರೀತಿಯಲ್ಲಿದೆ. ಇದನ್ನು ಸ್ಥಳೀಯವಾಗಿ ಮಾಡಿ ಕಳುಹಿಸಿರುವ ಸಾಧ್ಯತೆ ಇದೆ. ಇದು ಬೆದರಿಕೆ ಒಡ್ಡಲಿಕ್ಕಾಗಿಯೇ ಹೊಸದಾಗಿ ಕ್ರಿಯೇಟ್ ಮಾಡಲಾದ ಮೇಲ್ ಐಡಿ ರೀತಿಯಲ್ಲಿದೆ ಎಂದು ಸೈಬರ್ ತಜ್ಞೆ ಶುಭಾ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಎಪ್ರಿಲ್ 10 ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಪಡೆಯಬಹುದು – ಆರೋಗ್ಯ ಇಲಾಖೆ