ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ (Bengaluru) ಮತ್ತೆ ಹುಸಿ ಬಾಂಬ್ ಬೆದರಿಕೆ (Bomb Threat) ಸದ್ದು ಮಾಡುತ್ತಿದೆ. ಹಲಸೂರು (Halasuru) ಬಳಿ ಇರುವ ಇಟಲಿ ರಾಯಭಾರಿ ಕಚೇರಿಗೆ (Italian Embassy) ಇ-ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿದ್ದಾರೆ.
ಜನವರಿ 30ರಂದು ಬಂದಿದ್ದ ಬೆದರಿಕೆ ಮೇಲ್ ತಡವಾಗಿ ಬೆಳಕಿಗೆ ಬಂದಿದೆ. 5 ಆರ್‌ಡಿಎಕ್ಸ್ ಬಾಂಬ್ ಬ್ಲಾಸ್ಟ್ ಮಾಡುತ್ತೇವೆ ಎಂದು ಇ-ಮೇಲ್ ಮೂಲಕ ಬೆದರಿಕೆ ಒಡ್ಡಿದ್ದಾರೆ. ಇದನ್ನೂ ಓದಿ: ಮೆಟ್ರೋ ಆಯ್ತು ಈಗ ಕಾವೇರಿ ನೀರಿನ ದರವೂ ಏರಿಕೆ
ಇಟಾಲಿಯನ್ ಕಾನ್ಸುಲೇಟ್‌ನ ಸೆಕ್ಯೂರಿಟಿ ಮ್ಯಾನೇಜರ್ ಜಿಯೋಡೊಮೆನಿಕ್ ಒ ಮಿಲಾನೋ ಎಂಬವರು ಹಲಸೂರು ಪೊಲೀಸರಿಗೆ ದೂರು ನೀಡಿದ್ದಾರೆ. ಹಲಸೂರು ಪೊಲೀಸರು ಪ್ರಕರಣವನ್ನ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಕೊರಿಯನ್ ಹೆಸರಲ್ಲಿ ಅಕೌಂಟ್ ಸೃಷ್ಟಿಸಿ ಭಾರೀ ಫಾಲೋವರ್ಸ್ ಹೊಂದಿದ್ದ ಸಹೋದರಿಯರು

