ನವದೆಹಲಿ: ಪರೀಕ್ಷೆಗೆ ಹಾಜರಾಗಲು ಬಯಸದೇ ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿಯ ವಿದ್ಯಾರ್ಥಿಯೊಬ್ಬನನ್ನು ದೆಹಲಿ ಪೊಲೀಸರು (Delhi Police) ಬಂಧಿಸಿದ್ದಾರೆ. ವಿಚಾರಣೆ ವೇಳೆ ವಿದ್ಯಾರ್ಥಿ 23 ಶಾಲೆಗಳಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ದೆಹಲಿಯ ಉಪ ಪೊಲೀಸ್ ಆಯುಕ್ತ ಅಂಕಿತ್ ಚೌಹಾಣ್ ಮಾತನಾಡಿ, ಶಂಕಿತ ವಿದ್ಯಾರ್ಥಿ ದೆಹಲಿಯ 23 ಶಾಲೆಗಳಿಗೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದ. ತಾನು ಈ ಹಿಂದೆ ಬೆದರಿಕೆ ಇಮೇಲ್‌ಗಳನ್ನು ಕಳುಹಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಅಪ್ರಾಪ್ತ ಯುವಕ ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು ಶಾಲೆಗಳಲ್ಲಿ ಆತಂಕದ ವಾತಾವರಣ ಸೃಷ್ಟಿಸಲು ತಿರ್ಮಾನಿಸಿದ್ದ, ಈ ಹಿನ್ನೆಲೆ ಬಾಂಬ್ ಬೆದರಿಕೆ ಇಮೇಲ್ ಕಳುಹಿಸಿದ್ದು, ಇದರಿಂದ ಪರೀಕ್ಷೆ ರದ್ದಾಗಲಿ ಎಂದು ಆತ ಬಯಸಿದ್ದ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ರಾಜ್ಯದ ಎಲ್ಲಾ ವಿವಿಯಲ್ಲೂ ಖಾಲಿ ಹುದ್ದೆಗಳ ಖಾಯಂ ನೇಮಕಾತಿ ಆಗಲಿ: ನಮೋಶಿ
Advertisement
Advertisement
ನ.28 ರಂದು ರೋಹಿಣಿ ಪ್ರಶಾಂತ್ ವಿಹಾರ್ ಪಿವಿಆರ್ ಮಲ್ಟಿಪ್ಲೆಕ್ಸ್ನಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಅದಾದ ಒಂದು ದಿನದ ನಂತರ ಹಲವಾರು ಶಾಲೆಗಳು ಬಾಂಬ್ ಬೆದರಿಕೆಯನ್ನು ಸ್ವೀಕರಿಸಿದ್ದವು. ಜೊತೆಗೆ ವೆಂಕಟೇಶ್ವರ್ ಗ್ಲೋಬಲ್ ಸ್ಕೂಲ್‌ಗೆ ಬೆದರಿಕೆ ಇಮೇಲ್ ಬಂದಿತ್ತು. ಪೊಲೀಸರ ತನಿಖೆಯ ವೇಳೆ ವಿದ್ಯಾರ್ಥಿಯೇ ಬಾಂಬ್ ಬೆದರಿಕೆ ಹಾಕಿದ್ದ ಆರೋಪಿ ಎಂದು ತಿಳಿದುಬಂದಿದೆ.
Advertisement
ಕಳೆದ ತಿಂಗಳು 11 ದಿನಗಳಲ್ಲಿ 100ಕ್ಕೂ ಹೆಚ್ಚು ಬಾಂಬ್ ಬೆದರಿಕೆಗಳು ದೆಹಲಿ ಶಾಲೆಗಳನ್ನು ಅಸ್ತವ್ಯಸ್ತಗೊಳಿಸಿತ್ತು. ಈ ಇಮೇಲ್‌ಗಳನ್ನು ವಿಪಿಎನ್ (ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್) ಮೂಲಕ ಕಳುಹಿಸಲಾಗಿದೆ. ಹೀಗಾಗಿ ಅಪರಾಧಿಗಳನ್ನು ಪತ್ತೆಹಚ್ಚಲು ಕಠಿಣ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷದ ಮೇ ತಿಂಗಳಿನಿAದ 50ಕ್ಕೂ ಹೆಚ್ಚು ಬಾಂಬ್ ಬೆದರಿಕೆ ಇಮೇಲ್‌ಗಳನ್ನು ದೆಹಲಿಯ ಶಾಲೆಗಳು, ಆಸ್ಪತ್ರೆಗಳು, ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆಗಳು ಸ್ವೀಕರಿಸಿವೆ.ಇದನ್ನೂ ಓದಿ: ಬಜೆಟ್‌ಗೆ ಇನ್ನೆರಡು ತಿಂಗಳು ಬಾಕಿ – ಕಳೆದ ವರ್ಷದ ಬಜೆಟ್ ಹಣವನ್ನೇ ರಿಲೀಸ್ ಮಾಡದ ಸರ್ಕಾರ!