ನವದೆಹಲಿ: ಪುಣೆಗೆ ಹೋಗಬೇಕಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ (Spice Jet Flight) ಬಾಂಬ್ (Bomb) ಇದೆ ಎಂಬ ದೂರವಾಣಿ ಕರೆ ಬಂದಿದ್ದು, ಈ ಹಿನ್ನೆಲೆ ದೆಹಲಿಯ ವಿಮಾನ ನಿಲ್ದಾಣದಲ್ಲಿ (Delhi Airport) ವಿಮಾನವನ್ನು ತೀವ್ರವಾಗಿ ಶೋಧ ನಡೆಸಲಾಗುತ್ತಿದೆ.
ಗುರುವಾರ ಸಂಜೆ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ (IGI) ವಿಮಾನ ನಿಲ್ದಾಣದಿಂದ ಪುಣೆಗೆ ಹೋಗಬೇಕಿದ್ದ ಸ್ಪೈಸ್ ಜೆಟ್ ವಿಮಾನದಲ್ಲಿ ಬಾಂಬ್ ಇದೆ ಎಂದು ದೂರವಾಣಿ ಕರೆ ಬಂದಿದೆ. ಈ ಹಿನ್ನೆಲೆ ವಿಮಾನದಲ್ಲಿ ತೀವ್ರವಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.
Advertisement
Advertisement
ವಿಮಾನ ನಿಲ್ದಾಣದಿಂದ ಸಂಜೆ 6:30ರ ವೇಳೆಗೆ ಟೇಕ್ ಆಫ್ ಆಗಬೇಕಿತ್ತು. ಬಾಂಬ್ ಬೆದರಿಕೆ ಕುರಿತು ಕರೆ ಬಂದ ತಕ್ಷಣ ವಿಮಾನಯಾನ ಅಧಿಕಾರಿಗಳು ಬೋರ್ಡಿಂಗ್ ಅನ್ನು ನಿಲ್ಲಿಸಿದ್ದಾರೆ. ತಕ್ಷಣವೇ ಬಾಂಬ್ ನಿಷ್ಕ್ರಿಯ ದಳಕ್ಕೆ ಮಾಹಿತಿ ನೀಡಿದ್ದಾರೆ. ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದು, ವಿಮಾನವನ್ನು ಶೋಧಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಗೆ ಹಾರ ನೀಡಲು ಬಂದಿದ್ದು 10ರ ಬಾಲಕ – ಭದ್ರತೆಯಲ್ಲಿ ಲೋಪ ಆಗಿಲ್ಲ
Advertisement
Advertisement
ಇಲ್ಲಿಯವರೆಗೆ ವಿಮಾನದಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ. ಆದರೂ ಬಾಂಬ್ ಕರೆ ಹಿನ್ನೆಲೆ ಅರೆಸೇನಾ ಪಡೆ ಸಿಐಎಸ್‌ಎಫ್ ಹಾಗೂ ದೆಹಲಿ ಪೊಲೀಸರು ಅಲರ್ಟ್ ಆಗಿದ್ದಾರೆ. ಬಾಂಬ್ ಇರುವ ಬಗ್ಗೆ ಕರೆ ಮಾಡಿ ತಿಳಿಸಿದವರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಹಾಗೂ ಇದು ಹುಸಿ ಬಾಂಬ್ ಬೆದರಿಕೆಯೇ ಎಂಬುದನ್ನು ತಿಳಿಯಲು ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ರಾಜ್ಯ ಸರ್ಕಾರದ ಹೊಸ ಮೀಸಲಾತಿ ಸೂತ್ರಕ್ಕೆ ಬ್ರೇಕ್
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k