ಚಂಡೀಗಢ: ಗಣಿತ ಪರೀಕ್ಷೆ ನಡೆಯುವುದನ್ನು ತಡೆಯುವುದಕ್ಕಾಗಿ ವಿದ್ಯಾರ್ಥಿಯೊಬ್ಬ ಹುಸಿ ಬಾಂಬ್ ಬೆದರಿಕೆ ಕರೆ ಮಾಡಿರುವ ವಿಚಾರ ಪೊಲೀಸರು ತನಿಖೆಯಿಂದ ಬೆಳಕಿಗೆ ಬಂದಿದೆ.
ಅಮೃತಸರದ ಖಾಸಗಿ ಶಾಲೆಯೊಂದಕ್ಕೆ ಹುಸಿ ಬಾಂಬ್ ನೆಪ ಬೆದರಿಕೆ ಕರೆಯೊಂದು ಬಂದಿತ್ತು. ಇದರಲ್ಲಿ ವಿದ್ಯಾರ್ಥಿಯ ಪಾತ್ರ ಇರುವುದನ್ನು ಕಂಡು ಪೊಲೀಸರು ನಿಬ್ಬೆರಗಾಗಿದ್ದಾರೆ. ಇದನ್ನೂ ಓದಿ: 89 ವರ್ಷವಾದ್ರೂ ನನ್ನ ಪತಿ ಸೆಕ್ಸ್‌ಗಾಗಿ ಪೀಡಿಸ್ತಾನೆ – ಮಹಿಳಾ ಸಹಾಯವಾಣಿಗೆ ಕರೆ ಮಾಡಿದ 87ರ ವೃದ್ಧೆ
Advertisement
Advertisement
ಸೆಪ್ಟೆಂಬರ್ 16 ರಂದು ಶಾಲೆಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಲಾಗಿತ್ತು. ಬೆದರಿಕೆ ಸಂದೇಶದ ಮೂಲವನ್ನು ವಿದ್ಯಾರ್ಥಿಯ ತಂದೆಯ ಮೊಬೈಲ್ ಫೋನ್‌ನಿಂದ ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
Advertisement
Advertisement
ಇದು ಅಮೃತಸರದಲ್ಲಿ ಒಂದು ವಾರದಲ್ಲಿ ವರದಿಯಾದ ಎರಡನೇ ಘಟನೆಯಾಗಿದ್ದು, ನಗರದಲ್ಲಿ ಭೀತಿ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸಿದೆ. ನಗರದ ಶಾಲೆಯೊಂದು ಸೆಪ್ಟೆಂಬರ್ 7 ರಂದು ಬಾಂಬ್ ಬೆದರಿಕೆಯನ್ನು ವರದಿ ಮಾಡಿತ್ತು. ಇದನ್ನೂ ಓದಿ: ಪಾಕ್ ಜೈಲಿನಲ್ಲಿ ಮೃತಪಟ್ಟಿದ್ದ ಸರಬ್ಜಿತ್ ಸಿಂಗ್ ಪತ್ನಿ ರಸ್ತೆ ಅಪಘಾತದಲ್ಲಿ ಸಾವು