– ತಾಪಮಾನ ಮೈನಸ್ 48 ಡಿಗ್ರಿಗೆ ಇಳಿದು ನರಕ ಸೃಷ್ಟಿ
– 20 ಕೋಟಿಗೂ ಹೆಚ್ಚು ಜನರಿಗೆ ತೀವ್ರ ಸಂಕಷ್ಟ
– 15 ಲಕ್ಷ ಮನೆಗಳಿಗೆ ಕರೆಂಟ್ ಕಟ್
– 20 ಕೋಟಿಗೂ ಹೆಚ್ಚು ಜನರಿಗೆ ತೀವ್ರ ಸಂಕಷ್ಟ
– 15 ಲಕ್ಷ ಮನೆಗಳಿಗೆ ಕರೆಂಟ್ ಕಟ್
ವಾಷಿಂಗ್ಟನ್: ಅಮೆರಿಕದಲ್ಲಿ (US) ಹಿಮ ಸುನಾಮಿ (Bomb Cyclone) ಭೀಭತ್ಸ ಸೃಷ್ಟಿಸಿದೆ. ತೀವ್ರ ಶೀತಗಾಳಿಗೆ ಉಷ್ಣಾಂಶ ದೊಡ್ಡ ಪ್ರಮಾಣದಲ್ಲಿ ಬಿದ್ದುಹೋಗ್ತಿದೆ. ಮೈನಸ್ 48 ಡಿಗ್ರಿವರೆಗೂ ತಾಪಮಾನ ಕುಸಿದಿದೆ. ಪರಿಣಾಮ ಕುದಿಯುವ ನೀರು ಕೂಡ ಕ್ಷಣಮಾತ್ರದಲ್ಲಿ ಐಸ್ ಆಗ್ತಿದೆ.
Advertisement
ಕುಡಿಯುವ ನೀರಿಗೂ (Drinking Water) ಜನ ಪರದಾಡುವಂತಾಗಿದೆ. 15 ಲಕ್ಷ ಮನೆಗಳಿಗೆ ವಿದ್ಯುತ್ ಸರಬರಾಜು ಬಂದ್ ಆಗಿದ್ದು, ಜನ ಕತ್ತಲಲ್ಲಿ ಕೊಳೆಯುವಂತಾಗಿದೆ. ಅಂದಾಜು 20 ಕೋಟಿ ಮಂದಿ ಸಂತ್ರಸ್ತರಾಗಿದ್ದಾರೆ. ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಶ್ವಾನ, ಹಸು, ಹಂದಿಗಳೂ ಬಂದಿವೆ – ರಾಗಾ
Advertisement
Advertisement
ಭಾರೀ ಪ್ರಮಾಣದಲ್ಲಿ ಹಿಮ ಸುರಿಯುತ್ತಿರುವ ಕಾರಣ ಹೆದ್ದಾರಿಗಳನ್ನ (National Highway) ಬಂದ್ ಮಾಡಲಾಗಿದೆ. ಓಹಿಯೋದಲ್ಲಿ ಹಿಮ ತೂಫಾನ್ ಕಾರಣದಿಂದ 50 ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದುಕೊಂಡಿವೆ. ಮಿಚಿಗನ್‌ನಲ್ಲಿ 9 ಟ್ರ್ಯಾಕ್ಟರ್‌ಗಳು ಅಪಘಾತಕ್ಕೀಡಾಗಿವೆ. ನಿನ್ನೆಯೂ 5,000ಕ್ಕೂ ಹೆಚ್ಚು ವಿಮಾನಗಳ ಸಂಚಾರ ರದ್ದಾಗಿದೆ. ಏಳು ಸಾವಿರಕ್ಕೂ ಹೆಚ್ಚು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಇದನ್ನೂ ಓದಿ: ಭಾರತ್ ಜೋಡೋ ಯಾತ್ರೆಗೆ ಶ್ವಾನ, ಹಸು, ಹಂದಿಗಳೂ ಬಂದಿವೆ – ರಾಗಾ
Advertisement
ಕ್ರಿಸ್ಮಸ್ ಹಬ್ಬದ ಪ್ರಯಾಣವನ್ನು ಮುಂದೂಡುವಂತೆ ಜನಕ್ಕೆ ಅಮೆರಿಕ ಸರ್ಕಾರ ಸೂಚಿಸಿದೆ. ಡಕೋಟಾದ ಸ್ಮಶಾನವೊಂದು ಹಿಮದಲ್ಲಿ ಸಂಪೂರ್ಣವಾಗಿ ಮುಚ್ಚಿಹೋಗಿದೆ. ಡೆಟ್ರಾಯಿಟ್‌ನ ಮಂಜುಗಟ್ಟಿದ ಸರೋವರದಲ್ಲಿ ಸಿಲುಕಿದ್ದ ಬಾತುಕೋಳಿಯೊಂದನ್ನು ರಕ್ಷಿಸಲಾಗಿದೆ. ಅಮೆರಿಕಾದ ಶೇಕಡಾ 60ರಷ್ಟು ಜನ ಹಿಮ ಸುನಾಮಿಯ ಅಪಾಯದ ಅಂಚಿನಲ್ಲಿದ್ದಾರೆ. ಇನ್ನು ಒಂದೆರಡು ದಿನಗಳಲ್ಲಿ ಹಿಮ ತೂಫಾನ್ ಬಾಂಬ್ ಸೈಕ್ಲೋನ್ ಆಗಿ ಬದಲಾಗುವ ನಿರೀಕ್ಷೆ ಇದ್ದು, ಜನ ಆತಂಕಕ್ಕೀಡಾಗಿದ್ದಾರೆ.
Live Tv
[brid partner=56869869 player=32851 video=960834 autoplay=true]
[brid partner=56869869 player=32851 video=960834 autoplay=true]