– ಮಸ್ಕಿಯಿಂದ ಬಸ್ನಲ್ಲಿ ಬಾಂಬ್ ತಂದು ಬ್ಲ್ಯಾಸ್ಟ್
ಬೆಂಗಳೂರು: ಸಿಲಿಕಾನ್ ಸಿಟಿಯ ಪುಲಕೇಶಿನಗರದಲ್ಲಿ (Pulakeshinagar) ನಡೆದಿದ್ದ ಬಾಂಬ್ ಸ್ಫೋಟದ (Bomb Blast) ಸೂತ್ರದಾರರು ಸೆರೆಸಿಕ್ಕಿದ್ದು, ಕೇವಲ ವೈಯಕ್ತಿಕ ದ್ವೇಷ ಹಾಗೂ ಆಸ್ತಿ ವಿವಾದಕ್ಕಾಗಿ ಬಾಂಬ್ ಸ್ಫೋಟಿಸಿ ಕೊಲೆಗೆ ಸಂಚು ರೂಪಿಸಿದ್ದ ಅಸ್ಸಾಂ ಮೂಲದ ಖತರ್ನಾಕ್ ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪುಲಕೇಶಿನಗರದ ನಿರ್ಮಾಣ ಹಂತದ ಕಟ್ಟಡದಲ್ಲಿನ ಬಾಂಬ್ ಬ್ಲಾಸ್ಟ್ ಕೇಸ್ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಅಲ್ಲಾವುದ್ದೀನ್ ಎಂಬಾತನನ್ನು ಮುಗಿಸುವುದಕ್ಕಾಗಿಯೇ ಈ ಬಾಂಬ್ ಸ್ಕೆಚ್ ಹಾಕಲಾಗಿತ್ತು. ಅಸ್ಸಾಂ ಮೂಲದ ಅಲ್ಲಾವುದ್ದೀನ್ ಹಾಗೂ ಪ್ರಮುಖ ಆರೋಪಿ ಜಾಯಿದ್ ವುಲ್ ಹುಸೇನ್ ದಾಯಾದಿ ಸಂಬಂಧಿಗಳಾಗಿದ್ದು, ಇಬ್ಬರ ನಡುವೆ ಜಮೀನು ಮತ್ತು ಹಣಕಾಸಿನ ವಿಚಾರವಾಗಿ ತೀವ್ರ ವೈಷಮ್ಯವಿತ್ತು. ಅಷ್ಟೇ ಅಲ್ಲದೆ, ಜಾಯಿದ್ ವುಲ್ ತಂಗಿಯ ಮದುವೆಯನ್ನು ಅಲ್ಲಾವುದ್ದೀನ್ ಮುರಿದಿದ್ದ ಎಂಬ ಆರೋಪವು ಸಹ ಇದೆ. ಹುಡುಗ ಸರಿಯಿಲ್ಲ ಎಂದು ಹುಡುಗಿ ಮನೆಯವರಿಗೆ ಹೇಳಿ ಮದುವೆ ನಿಲ್ಲಿಸಿದ್ದನಂತೆ. ಈ ದ್ವೇಷದ ಕಿಚ್ಚಿನಿಂದಲೇ ಅಲ್ಲಾವುದ್ದೀನ್ನನ್ನು ಮುಗಿಸಲು ಆರೋಪಿ ಸ್ಕೆಚ್ ಹಾಕಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಅಂಬಾರಿ ಆನೆ ಆಯ್ಕೆ ವಿಷಯವನ್ನ ನನ್ನಿಂದ ಮುಚ್ಚಿಡಲಾಗಿತ್ತು: ಪ್ರಮೋದಾದೇವಿ ಒಡೆಯರ್ ಬೇಸರ
ದ್ವೇಷ ತೀರಿಸಿಕೊಳ್ಳಲು ಜಾಯಿದ್ ವುಲ್, ತನ್ನ ಸ್ನೇಹಿತರಾದ ಸಾಜಿದ್ ವುಲ್ ಇಸ್ಲಾಂ ಹಾಗೂ ಬುರ್ಹಾನ್ ಅಹಮದ್ ಜೊತೆ ಸೇರಿ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದ. 8ನೇ ತರಗತಿ ಮಾತ್ರ ಓದಿದ್ದ, ಬುರ್ಹಾನ್ ಅಹಮದ್ ರಾಯಚೂರಿನ ಮಸ್ಕಿಯಲ್ಲಿ ವೆಲ್ಡಿಂಗ್ ಹಾಗೂ ಎಲೆಕ್ಟ್ರಿಕ್ ಕೆಲಸ ಮಾಡುತ್ತಿದ್ದ. ಚಾಟ್ ಜಿಪಿಟಿ, ಎಐ ಹಾಗೂ ಡೀಪ್ ಟೆಕ್ ಮೂಲಕ ಮಾಹಿತಿ ಪಡೆದು ಐಇಡಿ ಬಾಂಬ್ ಸಿದ್ಧಪಡಿಸಿದ್ದ. ಪಟಾಕಿ ಮದ್ದು, ಬ್ಯಾಟರಿ, ಸರ್ಕ್ಯೂಟ್ ಹಾಗೂ ಬಟನ್ ಫಿಕ್ಸ್ ಮಾಡಿ ಸ್ಫೋಟಕ ಪಾರ್ಸೆಲ್ ರೆಡಿ ಮಾಡಿದ್ದ. ಇದನ್ನೂ ಓದಿ: ಬರದಿಂದ ಶೇ. 80ರಷ್ಟು ಬೆಳೆ ನಷ್ಟ; ರೈತರಿಗೆ ಪರಿಹಾರ ಶೀಘ್ರ ಬಿಡುಗಡೆಗೆ ಕೇಂದ್ರಕ್ಕೆ ಒತ್ತಾಯ: ಪರಮೇಶ್ವರ್
ಮಸ್ಕಿಯಲ್ಲಿ ಬಾಂಬ್ ಸಿದ್ಧಪಡಿಸಿದ ಬುರ್ಹಾನ್, ಬಸ್ ಮೂಲಕ ಅದನ್ನು ಬೆಂಗಳೂರಿಗೆ ತಂದಿದ್ದ. ಬಳಿಕ ಸಾಜಿದ್ ನೀಡಿದ ಶೆಲ್ಟರ್ನಲ್ಲಿ ಉಳಿದುಕೊಂಡು, ನಿರ್ಮಾಣ ಹಂತದ ಕಟ್ಟಡದ ಬಳಿ ಬಂದು ಪಾರ್ಸೆಲ್ ಇಟ್ಟಿದ್ದ. ಸಾರ್ವಜನಿಕ ಫೋನ್ ಬಳಸಿ ಅಲ್ಲಾವುದ್ದೀನ್ಗೆ ಕರೆ ಮಾಡಿ, ಪಾರ್ಸೆಲ್ ಬಂದಿದೆ ರಿಸೀವ್ ಮಾಡಿಕೋ ಎಂದಿದ್ದ. ಅಲ್ಲಾವುದ್ದೀನ್ ಆ ಪಾರ್ಸೆಲ್ ಅನ್ನು ಪೇಂಟರ್ ಸೂರಜ್ಗೆ ಕೊಟ್ಟಿದ್ದ. ಮಾರನೇ ದಿನ ಪಾರ್ಸೆಲ್ ಓಪನ್ ಮಾಡಲು ಹೋದಾಗ ತಕ್ಷಣ ಭೀಕರ ಬ್ಲಾಸ್ಟ್ ಸಂಭವಿಸಿದೆ. ಇದನ್ನೂ ಓದಿ: ಸಿದ್ದಗಂಗಾ ಶ್ರೀಗಳ ಆಶೀರ್ವಾದದಿಂದಲೇ ಇಂದು ಉಪಮುಖ್ಯಮಂತ್ರಿಯಾಗಿದ್ದೇನೆ: ಪರಮೇಶ್ವರ್
ಸ್ಫೋಟದಿಂದ ಕಾರ್ಮಿಕ ಸೂರಜ್ ಗಂಭೀರ ಗಾಯಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಪ್ರಕರಣ ಬೆನ್ನತ್ತಿದ ಪೂರ್ವ ವಿಭಾಗದ ಪೊಲೀಸರು, 10 ವಿಶೇಷ ತಂಡಗಳನ್ನು ರಚಿಸಿ ಬರೋಬ್ಬರಿ 1500 ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಅಸ್ಸಾಂ ಪೊಲೀಸರು, ರಾಯಚೂರು ಪೊಲೀಸರು ಹಾಗೂ ಎಟಿಸಿ ಅಧಿಕಾರಿಗಳ ನೆರವಿನಿಂದ ಪ್ರಕರಣವನ್ನು ಭೇದಿಸಿ, ಕೃತ್ಯ ಎಸಗಿದ ಮೂವರನ್ನೂ ಈಗ ಕಂಬಿ ಎಣಿಸುವಂತೆ ಮಾಡಿದ್ದಾರೆ. ಇದನ್ನೂ ಓದಿ: ಕನ್ನಡಿಗರನ್ನು ಕಡೆಗಣಿಸಿದ್ರೆ ಸೂಕ್ತ ಕ್ರಮ – ಖಾಸಗಿ ಕಂಪನಿಗಳಿಗೆ ಡಿಕೆಶಿ ಖಡಕ್ ಎಚ್ಚರಿಕೆ
ದಸರಾ ಸಂಧರ್ಭದಲ್ಲಿ ಹೀಗೆ ಆತಂಕವುಂಟು ಮಾಡಿದ್ದ ಆರೋಪಿಗಳು ಅಂದರ್ ಆಗಿದ್ದಾರೆ. ಇನ್ನು ಹಗಲಿರುಳು ದುಡಿದು ಕೇಸ್ ಪತ್ತೆ ಮಾಡಿದ ಪೊಲೀಸರಿಗೆ ಕಮೀಷನರ್ ಮೂರು ಲಕ್ಷ ಬಹುಮಾನ ಘೋಷಿಸಿದ್ದಾರೆ. ಇದನ್ನೂ ಓದಿ: ‘ಪ್ರೇಮದ ಊರಲಿ’ ಸಿನಿಮಾ ಎಫೆಕ್ಟ್ – ಮಳೆ ಮಲ್ಲೇಶ್ವರ ದೇವಾಲಯಕ್ಕೆ ಪ್ರವಾಸಿಗರ ದಂಡು!
