ಇಸ್ಲಾಮಾಬಾದ್: ಬಲೂಚಿಸ್ತಾನದಲ್ಲಿ ರೈಲು ಹೈಜಾಕ್ ಪ್ರಕರಣದ ಬೆನ್ನಲ್ಲೇ ಪಾಕಿಸ್ತಾನ (Pakistan) ವಜರಿಸ್ತಾನದ ಮಸೀದಿಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಜಮಿಯತ್ ಉಲೇಮಾ-ಎ-ಇಸ್ಲಾಂ(ಜೆಯುಐ) ಜಿಲ್ಲಾ ಮುಖ್ಯಸ್ಥ ಅಬ್ದುಲ್ಲಾ ನದೀಮ್ ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ.
ಅಜಮ್ ವಾರ್ಸಾಕ್ ಬೈಪಾಸ್ ರಸ್ತೆಯಲ್ಲಿರುವ ಮೌಲಾನಾ ಅಬ್ದುಲ್ ಅಜೀಜ್ ಮಸೀದಿಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ. ಮಾ. 14ರ ಶುಕ್ರವಾರದಂದು ಪ್ರಾರ್ಥನೆಯ ಸಮಯದಲ್ಲಿ ಮಸೀದಿಯ ಪ್ರವಚನ ಪೀಠದಲ್ಲಿ ಇರಿಸಲಾಗಿದ್ದ ಬಾಂಬ್ ಸ್ಫೋಟಗೊಂಡಿದೆ ಎಂದು ವರದಿ ತಿಳಿಸಿದೆ. ಇದನ್ನೂ ಓದಿ: ಕೇಂದ್ರದ 2 ಸಾವಿರ ಕೋಟಿ ಕಳೆದುಕೊಂಡರೂ ನಾವು ನಮ್ಮ ಸಿದ್ಧಾಂತದಲ್ಲಿ ರಾಜಿಯಾಗಲ್ಲ: ತಮಿಳುನಾಡು
ಸ್ಥಳಕ್ಕಾಗಮಿಸಿದ ರಕ್ಷಣಾ ತಂಡಗಳು ಗಾಯಾಳುಗಳನ್ನು ವಾನಾದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ತನಿಖೆಯ ಅಂಗವಾಗಿ ಪೊಲೀಸರು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಸಿವೆ. ಇದನ್ನೂ ಓದಿ: 2ನೇ ಏರ್‌ಪೋರ್ಟ್ ನಿರ್ಮಾಣಕ್ಕೆ ತಮಿಳುನಾಡು ಸರ್ಕಾರಕ್ಕೆ ಗ್ರೀನ್ ಸಿಗ್ನಲ್ – ಹೊಸೂರು ಬಳಿ 2 ಸ್ಥಳ ಫೈನಲ್
ಕಳೆದ ಒಂದು ತಿಂಗಳ ಹಿಂದೆ ಪಾಕಿಸ್ತಾನದ ನೌಶೇರಾ ಜಿಲ್ಲೆಯ ದಾರುಲ್ ಉಲೂಮ್ ಹಕ್ಕಾನಿಯಾ ಸೆಮಿನರಿ ಮೇಲೆ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದರು. ದಾಳಿಯಲ್ಲಿ ಜೆಯುಐ-ಎಸ್ ನಾಯಕ ಮೌಲಾನಾ ಹಮೀದುಲ್ ಹಕ್ ಹಕ್ಕಾನಿ ಸೇರಿ ಆರು ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಾಯಗೊಂಡಿದ್ದರು. ಇದನ್ನೂ ಓದಿ: ಕರ್ನಾಟಕ ರಾಜ್ಯ ಖನಿಜ ಅಭಿವೃದ್ಧಿ ನಿಗಮದಿಂದ 1402 ಕೋಟಿ ರೂ.ಚೆಕ್ ಹಸ್ತಾಂತರ
ಕೆಲ ದಿನಗಳ ಹಿಂದೆ ಬಲೂಚಿಸ್ತಾನದಲ್ಲಿ ಬಲೂಚ್ ಪ್ರತ್ಯೇಕತಾ ವಾದಿ ಉಗ್ರರ ಗುಂಪು ರೈಲನ್ನು ಹೈಜಾಕ್ ಮಾಡಿತ್ತು. ಈ ಎಲ್ಲಾ ದಾಳಿಗಳ ಹಿಂದೆ ಕಾಬೂಲ್‌ನ ಕೈವಾಡವಿದೆ ಎಂದು ಪಾಕಿಸ್ತಾನ ಸರ್ಕಾರ ಆರೋಪಿಸಿದೆ.