ವಿವೇಕ್ ಅಗ್ನಿಹೋತ್ರಿ ನಿರ್ದೇಶನದಲ್ಲಿ ಮೂಡಿ ಬಂದ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಐವತ್ತು ದಿನಗಳ ದಾಟಿ ಮುನ್ನುಗ್ಗುತ್ತಿರುವ ಈ ಸಂದರ್ಭದಲ್ಲಿ ಹೊಸ ಸುದ್ದಿಯೊಂದನ್ನು ಕೊಟ್ಟಿದೆ. ಕೇವಲ ಹಿಂದಿಯಲ್ಲಿ ಮಾತ್ರ ರಿಲೀಸ್ ಆಗಿದ್ದ ಈ ಸಿನಿಮಾ ಇದೀಗ ಇತರ ಭಾಷೆಗಳಿಗೂ ಡಬ್ ಆಗಿದೆ. ಹಿಂದಿ ಅರ್ಥ ಆಗದೇ ಇರುವವರು ಈಗ ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ತಮ್ಮದೇ ಭಾಷೆಯಲ್ಲಿ ನೋಡಬಹುದು. ಇದನ್ನೂ ಓದಿ : ಮಗನೊಂದಿಗೆ ನಿಖಿಲ್ ಕುಮಾರ್ ಸ್ವಾಮಿ ಜಾಲಿ ಟ್ರೀಪ್
Advertisement
ಕಾಶ್ಮೀರ ಪಂಡಿತರ ಹತ್ಯಾಕಾಂಡದ ಘಟನೆಯನ್ನು ಇಟ್ಟುಕೊಂಡು ಮಾಡಿರುವ ಈ ಸಿನಿಮಾ ದೇಶಾದ್ಯಂತ ಸಾಕಷ್ಟು ಸಂಚಲನ ಮೂಡಿಸಿತ್ತು. ಸ್ವತಃ ಕೇಂದ್ರ ಸರಕಾರವೇ ಈ ಸಿನಿಮಾದ ಬೆನ್ನಿಗೆ ನಿಂತು ಜನರಿಗೆ ತಲುಪವಲ್ಲಿ ಸಹಕರಿಸಿತ್ತು. ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳು ಈ ಸಿನಿಮಾಗೆ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದವು. ಅಲ್ಲದೇ, ಕೆಲ ಸಂಘಟನೆಗಳು ಕೂಡ ಸ್ವಯಂ ಪ್ರೇರಿತರಾಗಿ ಈ ಸಿನಿಮಾವನ್ನು ಜನರಿಗೆ ತೋರಿಸಿದರು. ಈಗ ಮತ್ತಷ್ಟು ಜನರಿಗೆ ಅವರದ್ದೇ ಭಾಷೆಯಲ್ಲಿ ತೋರಿಸಲು ಚಿತ್ರತಂಡ ಮುಂದಾಗಿದೆ. ಇದನ್ನೂ ಓದಿ : ಜೇಮ್ಸ್ ಟೀಮ್ ಮೊದಲೇ ಈ ಕೆಲಸ ಮಾಡಬೇಕಿತ್ತು : ನಟ ಶಿವರಾಜ್ ಕುಮಾರ್
Advertisement
Advertisement
ಹೌದು, ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಕನ್ನಡಕ್ಕೂ ಡಬ್ ಆಗಿ ಬರುತ್ತಿದೆ. ಆದರೆ, ಈ ಸಿನಿಮಾ ಥಿಯೇಟರ್ ಬರುವುದಿಲ್ಲ. ಜೀ 5 ಓಟಿಟಿ ವೇದಿಕೆಯಲ್ಲಿ ಈ ಡಬ್ ಆದ ದಿ ಕಾಶ್ಮೀಪ್ ಫೈಲ್ ಸಿನಿಮಾವನ್ನು ನೋಡಬಹುದಾಗಿದೆ. ಸ್ವತಃ ಜೀ 5 ಸೋಷಿಯಲ್ ಮೀಡಿಯಾದ ಮೂಲಕ ಈ ಸುದ್ದಿಯನ್ನು ನೋಡುಗರಿಗೆ ನೀಡಿದೆ. ಇದನ್ನೂ ಓದಿ : ಜೋಗಿ ಪ್ರೇಮ್ ಹೊಸ ಸಿನಿಮಾ ಘೋಷಣೆ : ಧ್ರುವ ಸರ್ಜಾ ಹೀರೋ, ಏ.24 ಮುಹೂರ್ತ
Advertisement
ಕನ್ನಡದ ಹೆಸರಾಂತ ನಿರ್ದೇಶಕ ಪ್ರಕಾಶ್ ಬೆಳವಾಡಿ ಸೇರಿದಂತೆ ಬಾಲಿವುಡ್ ನ ಅನೇಕ ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಇದೊಂದು ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದರಿಂದ, ಕರ್ನಾಟಕ ಸರಕಾರ ಕೂಡ ಚಿತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿತ್ತು. ಅಲ್ಲದೇ, ಕರ್ನಾಟಕ ಬಿಜೆಪಿ ಈ ಸಿನಿಮಾವನ್ನು ಡಬ್ ಮಾಡಿ ಕನ್ನಡಕ್ಕೆ ತರುವ ಪ್ರಯತ್ನಕ್ಕೂ ಮುಂದಾಗಿತ್ತು. ಆದರೆ, ಜಿ 5 ಈ ಕೆಲಸವನ್ನು ಮಾಡಿದೆ.