ರಾಕಿಂಗ್ ಸ್ಟಾರ್ ಯಶ್ (Yash) ಸಹ ನಿರ್ಮಾಣದ ‘ರಾಮಾಯಣ’ ಪ್ರಾಜೆಕ್ಟ್‌ನಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ (Vivek Oberoi) ನಟಿಸಲಿದ್ದಾರೆ ಎನ್ನಲಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ:ಕಾಮಾಕ್ಯ ದೇಗುಲಕ್ಕೆ ನಟಿ ಕಾರುಣ್ಯ ರಾಮ್ ಭೇಟಿ
‘ರಾಮಾಯಣ’ (Ramayana) ಚಿತ್ರದಲ್ಲಿ ನಟಿಸುವ ತಾರಾಗಣ ದಿನದಿಂದ ದಿನಕ್ಕೆ ಹಿರಿದಾಗುತ್ತಲೇ ಇದೆ. ಚಿತ್ರದಲ್ಲಿ ‘ರಾವಣ’ ಯಶ್‌ಗೆ ಮಡದಿಯಾಗಿ ಮಗಧೀರ ನಟಿ ಕಾಜಲ್ ಅಗರ್ವಾಲ್ ‘ಮಂಡೋರಿ’ ರೋಲ್‌ನಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಹಬ್ಬಿತ್ತು. ಈ ಬೆನ್ನಲ್ಲೇ ವಿವೇಕ್ ಒಬೆರಾಯ್ ಕೂಡ ಯಶ್ ಜೊತೆ ತೆರೆಹಂಚಿಕೊಳ್ಳಲಿದ್ದಾರಂತೆ. ಹಾಗಂತ ಸೋಷಿಯಲ್ ಮೀಡಿಯಾದಲ್ಲಿ ಗುಸು ಗುಸು ಚರ್ಚೆ ಶುರುವಾಗಿದೆ. ಇದನ್ನೂ ಓದಿ:‘ಅನಿಮಲ್’ ನಟಿಗೆ ಬಂಪರ್ ಆಫರ್- ಪ್ರಭಾಸ್‌ಗೆ ನಾಯಕಿಯಾದ ತೃಪ್ತಿ ದಿಮ್ರಿ
ಈ ಚಿತ್ರದಲ್ಲಿ ಶೂರ್ಪನಖಿಯ ಪತಿ ವಿದ್ಯುತ್ಜಿಹ್ವನ ಪಾತ್ರದಲ್ಲಿ ವಿವೇಕ್ ಒಬೆರಾಯ್ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿದೆ. ಈ ಚಿತ್ರದಲ್ಲಿ ಶೂರ್ಪನಖಿ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಬಣ್ಣ ಹಚ್ಚಿದ್ದಾರೆ. ಈ ನಟಿಯ ಪತಿಯ ಪಾತ್ರದಲ್ಲಿ ವಿವೇಕ್ ನಟಿಸುವ ಸಾಧ್ಯತೆಯಿದೆ ಎನ್ನಲಾಗ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜನಾ? ಈ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಗುವವರೆಗೂ ಕಾಯಬೇಕಿದೆ.
ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರೋದು ಅಧಿಕೃತವಾಗಿದೆ. ಉಳಿದ ಪಾತ್ರಗಳ ಆಯ್ಕೆ ಬಗ್ಗೆ ಚಿತ್ರತಂಡದ ಕಡೆಯಿಂದ ಅಧಿಕೃತ ಮಾಹಿತಿ ಸಿಗಬೇಕಿದೆ.
ರಾಮಾಯಣ ಸಿನಿಮಾವನ್ನು ಎರಡು ಭಾಗಗಳಲ್ಲಿ ತರೋದಾಗಿ ಈಗಾಗಲೇ ಚಿತ್ರತಂಡ ತಿಳಿಸಿದೆ. 2026ರಲ್ಲಿ ಸಿನಿಮಾ ರಿಲೀಸ್ ಆಗಲಿದೆ.