ಉದ್ಯಮಿ ಮುಖೇಶ್ ಅಂಬಾನಿ (Mukesh Ambani) ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಅಂಬಾನಿ ಕುಟುಂಬದ ಹಬ್ಬದಲ್ಲಿ ಬಾಲಿವುಡ್ (Bollywood) ನಟ, ನಟಿಯರು ಭಾಗಿಯಾಗಿ ಗಣಪನ ಆಶೀರ್ವಾದ ಪಡೆದಿದ್ದಾರೆ. ಪಾಲ್ಗೊಂಡಿರುವ ಸೆಲೆಬ್ರಿಟಿಗಳ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿವೆ.
View this post on Instagram
ಹಬ್ಬದಲ್ಲಿ ಸಲ್ಮಾನ್ ಖಾನ್ (Salman Khan) ಭಾಗಿಯಾಗಿ ಗಣೇಶನ ಆಶೀರ್ವಾದ ಪಡೆದಿದ್ದಾರೆ. ಸೌತ್ ಬ್ಯೂಟಿ ಪೂಜಾ ಹೆಗ್ಡೆ (Pooja Hegde) ತಮ್ಮ ಕುಟುಂಬದ ಜೊತೆ ಆಗಮಿಸಿ ಗಣಪನ ದರ್ಶನ ಪಡೆದಿದ್ದಾರೆ.
ಆಯುಷ್ಮಾನ್ ದಂಪತಿ ಕೂಡ ಅಂಬಾನಿ ಮನೆಯ ಹಬ್ಬದಲ್ಲಿ ಭಾಗಿಯಾಗಿ ಸಂಭ್ರಮಿಸಿದ್ದಾರೆ. ಬಳಿಕ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಹೆರಿಗೆ ಆಸ್ಪತ್ರೆಗೆ ಅಡ್ಮಿಟ್ ಆದ ದೀಪಿಕಾ ಪಡುಕೋಣೆ
ಪತಿ ಜೊತೆ ಮಾಧುರಿ ದೀಕ್ಷೀತ್ ಭೇಟಿ ಕೊಟ್ಟಿರೋದು ಅಭಿಮಾನಿಗಳ ಗಮನ ಸೆಳೆದಿದೆ. ಶಿಲ್ಪಾ ಶೆಟ್ಟಿ, ಕಾಜಲ್ ಅಗರ್‌ವಾರ್, ನಟಿ ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ (Shraddha Kapoor), ಕಿಯಾರಾ ಅಡ್ವಾಣಿ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿ ಗಣಪನ ದರ್ಶನ ಪಡೆದಿದ್ದಾರೆ.
ಇತ್ತ ಮಗ ಅನಂತ್ ಮತ್ತು ಸೊಸೆ ರಾಧಿಕಾ ಜೊತೆ ನೀತಾ ಅಂಬಾನಿ ಕೂಡ ಕ್ಯಾಮೆರಾಗೆ ಮಸ್ತ್ ಆಗಿ ಪೋಸ್ ನೀಡಿದ್ದಾರೆ. ಹಬ್ಬದ ಝಲಕ್ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿದೆ.