50ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಭಾಗಿ ನಿರೀಕ್ಷೆ
ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಟಿಬಿ ಮುಕ್ತ ಜಾಗೃತಿ ಕ್ರಿಕೆಟ್ (TB Awareness Cricet Match) ಪಂದ್ಯವು ಮಾ.22ರಂದು ಮುಂಬೈನ ಎಂಸಿಎ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ವಿಶೇಷ ಕಾರ್ಯಕ್ರಮಕ್ಕೆ ಬಿಗ್‌ಬಿ, ಶಾರುಖ್ ಖಾನ್ (Shah Rukh Khan), ಸಲ್ಮಾನ್ ಖಾನ್ (Salman Khan), ರಣಬೀರ್ ಕಪೂರ್, ವಿಕ್ಕಿ ಕೌಶಲ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಮಾ.22ರಂದು ಬಿಜೆಪಿ ಸಂಸದ ಅನುರಾಗ್ ಠಾಕೂರ್ ಮತ್ತು ಬಾಲಿವುಡ್ ನಟ ಸುನೀಲ್ ಶೆಟ್ಟಿ (Suniel Shetty) ತಂಡಗಳ ನಡುವೆ ಮ್ಯಾಚ್ ನಡೆಯಲಿದೆ. ಈ ಎರಡು ತಂಡಗಳ ಜುಗಲ್‌ಬಂದಿ ವೀಕ್ಷಿಸಲು 50ಕ್ಕೂ ಹೆಚ್ಚು ಸೆಲೆಬ್ರಿಟಿಗಳು ಭಾಗವಹಿಸಲಿದ್ದಾರೆ. ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮ ನಡೆಯಲಿದೆ.
टीबी हारेगा, देश जीतेगा!
आदरणीय प्रधानमंत्री श्री @narendramodi जी की परिकल्पना ‘टीबी मुक्त भारत’ के संकल्प को साकार करने के लिए क्रिकेट की पिच पर उतरेंगे राजनीति और सिनेमा जगत के धुरंधर
देखना न भूलें
Neta XI Vs. Abhineta XI
MCA Cricket Ground, Bandra Kurla Complex, Mumbai
22… pic.twitter.com/vGC2B4aaZ0
— Anurag Thakur (@ianuragthakur) March 19, 2025
ಅಮೀರ್ ಖಾನ್, ಅಜಯ್ ದೇವಗನ್, ಸಂಜಯ್ ದತ್, ಅನಿಲ್ ಕಪೂರ್, ಸನ್ನಿ ಡಿಯೋಲ್, ಹೃತಿಕ್ ರೋಷನ್, ಜಾಕಿ ಶ್ರಾಫ್, ಸೈಫ್ ಅಲಿ ಖಾನ್, ಕಾರ್ತಿಕ್ ಆರ್ಯನ್, ಸಿದ್ಧಾರ್ಥ್ ಮಲ್ಹೋತ್ರಾ, ಅಭಿಷೇಕ್ ಬಚ್ಚನ್, ಶಾಹಿದ್ ಕಪೂರ್, ರೋಹಿತ್ ಶೆಟ್ಟಿ ಸೇರಿದಂತೆ ಅನೇಕರು ಈ ಕಾರ್ಯಕ್ರಮಕ್ಕೆ ಸಾಥ್ ನೀಡಲಿದ್ದಾರೆ.