– ಕೆಕೆಆರ್ ಉತ್ಸಾಹಕ್ಕೆ ಇವರೇ ಕಾರಣ ಅಂದ್ರು ಫ್ಯಾನ್ಸ್
ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ಸ್ನಲ್ಲಿ ಗುರುವಾರ ಆರ್‌ಸಿಬಿ ಮತ್ತು ಕೋಲ್ಕತ್ತಾ ನೈಟ್‌ರೈಡರ್ಸ್ (KKR) ನಡುವೆ ನಡೆದ ಪಂದ್ಯ ವೀಕ್ಷಣೆ ಮಾಡಲು ಬಾಲಿವುಡ್ ತಾರೆಯರು ಆಗಮಿಸಿ, ಕೆಕೆಆರ್ ತಂಡಕ್ಕೆ ಬಲ ತುಂಬಿದರು.
ಬಾಲಿವುಡ್ ಬಾದ್ ಷಾ ಖ್ಯಾತಿಯ ಶಾರುಖ್ ಖಾನ್ (Shah Rukh Khan), ಅವರ ಪುತ್ರಿ ಸುಹಾನಾ ಖಾನ್, ಜೂಹಿ ಚಾವ್ಲಾ (Juhi Chawla) ಸೇರಿದಂತೆ ಅನೇಕರು ಐಪಿಎಲ್ ವೀಕ್ಷಣೆ ಮಾಡಿ ಸಂಭ್ರಮಿಸಿದರು.
ಶಾರುಖ್ ಖಾನ್ ಪಠಾಣ್ ಸಿನಿಮಾ ಥಿಯೇಟರ್ ನಲ್ಲಿ ಈಗಾಗಲೇ ದಾಖಲೆ ಬರೆದಿದ್ದು, ಒಟಿಟಿಯಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಆಕ್ಷನ್ ಭರಿತ ಬಾಲಿವುಡ್ ಬ್ಲಾಕ್ ಬಸ್ಟರ್ ಪಠಾಣ್ ಚಿತ್ರ ಅಮೆಜಾನ್ ಪ್ರೈಮ್ ವೀಡಿಯೋ ಪ್ಲಾಟ್‌ಫಾರ್ಮ್ ನಲ್ಲಿ ಸ್ಟ್ರೀಮ್ ಆಗುತ್ತಿದೆ.
ಸದಾ ಸಿನಿ ಜರ್ನಿ ಬ್ಯೂಸಿಯಲ್ಲಿರುವ ಶಾರೂಖ್ ಖಾನ್, ಜೂಹಿ ಚಾವ್ಲಾ ಗುರುವಾರ ಕ್ರಿಕೆಟ್ ಅಂಗಳಕ್ಕೆ ಬಂದು ತಮ್ಮ ತಂಡಕ್ಕೆ ಉತ್ಸಾಹ ತುಂಬಿದ್ದಾರೆ. ಇದರೊಂದಿಗೆ ಶಾರೂಖ್ ಪುತ್ರಿ ಸುಹಾನ ಸಹ ಹಾಟ್‌ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಕೆಕೆಆರ್ ಸಹ ತವರಿನಲ್ಲಿ ಅಭಿಮಾನಿಗಳ ನಿರೀಕ್ಷೆ ಹುಸಿಯಾಗದಂತೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಆರಂಭದಲ್ಲಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾದರೂ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 204 ರನ್ ಗಳಿಸುವಲ್ಲಿ ಯಶಸ್ವಿಯಾಗಿದೆ.