ಬಹುಭಾಷಾ ನಟಿ ಕಾಜಲ್ ಅಗರ್‌ವಾಲ್ (Kajal Aggarwal) ಅವರು ಮದುವೆ, ಸಂಸಾರ ಅಂತಾ ಬ್ಯುಸಿಯಾಗಿದ್ದಾರೆ. ಈ ನಡುವೆ ಮತ್ತೆ ಬಣ್ಣ ಹಚ್ಚೋದ್ದಕ್ಕೆ ರೆಡಿಯಾಗಿದ್ದಾರೆ. ಬಾಲಯ್ಯಗೆ ನಾಯಕಿಯಾಗುವ ಮೂಲಕ ನಟಿ ಸೌಂಡ್ ಮಾಡ್ತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಲಿವುಡ್ (Bollywood) ಹಾಗೂ ಸೌತ್ ಇಂಡಸ್ಟ್ರಿಗಳ ನಡುವಿನ ವ್ಯತ್ಯಾಸದ ಬಗ್ಗೆ ಮಾತನಾಡಿದ್ದಾರೆ.
Advertisement
ನಟಿ ಕಾಜಲ್ ಅಗರ್‌ವಾಲ್ ಅವರು ಬಾಲಿವುಡ್ ಮತ್ತು ಸೌತ್ ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ. ಅದರಲ್ಲೂ ಹಿಂದಿ ಸಿನಿಮಾಗಳಿಗಿಂತ ತೆಲುಗು- ತಮಿಳು ಸಿನಿಮಾಗಳಿಂದಲೇ ಕಾಜಲ್ ಫೇಮಸ್ ಆಗಿದ್ದಾರೆ. ಇದೀಗ ಸಂದರ್ಶನವೊಂದರಲ್ಲಿ ನಟಿ ಬಾಲಿವುಡ್‌ನ ಕೊರತೆಗಳನ್ನ ಬಿಚ್ಚಿಟ್ಟಿದ್ದಾರೆ.ಇದನ್ನೂ ಓದಿ:ಪ್ರಿಯಾಂಕಾ ಚೋಪ್ರಾನ ತರಾಟೆಗೆ ತೆಗೆದುಕೊಂಡ ನಟಿ ರಾಖಿ ಸಾವಂತ್
Advertisement
Advertisement
ಹಿಂದಿ ದೇಶದ ದೊಡ್ಡ ಭಾಷೆಯಾದ ಕಾರಣ ಹಲವಾರು ಕಲಾವಿದರು ಬಾಲಿವುಡ್ (Bollywood) ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಬೇಕು (Entry) ಎಂದು ಆಶಿಸುತ್ತಾರೆ. ಇನ್ನು ದಕ್ಷಿಣ ಭಾರತದ ಚಿತ್ರರಂಗವು ಸ್ನೇಹದಿಂದ ನೋಡುತ್ತಾರೆ. ಕಲಾವಿದರನ್ನು ಅಲ್ಲಿಯ ಜನ ಒಪ್ಪಿಕೊಳ್ತಾರೆ. ದಕ್ಷಿಣದಲ್ಲಿ ಹಲವಾರು ಪ್ರತಿಭಾವಂತ ತಂತ್ರಜ್ಞರಿದ್ದು, ಅದ್ಭುತವಾದ ನಿರ್ದೇಶಕರಿದ್ದಾರೆ. ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಈ ನಾಲ್ಕೂ ಭಾಷೆಗಳಲ್ಲಿಯೂ ಕಂಟೆಂಟ್ ಹೆಚ್ಚಿದೆ ಎಂದರು.
Advertisement
ಇನ್ನೂ ಮುಂದುವರಿದು ಮಾತನಾಡಿದ ಕಾಜಲ್ , ಹಿಂದಿ ನನ್ನ ಮಾತೃಭಾಷೆ ಹೌದು. ನಾನು ಹಿಂದಿ ಚಿತ್ರಗಳಿಂದ ಬೆಳೆದಿದ್ದೇನೆ. ಹಿಂದಿ ಚಿತ್ರರಂಗ ನನ್ನನ್ನು ಒಪ್ಪಿಕೊಂಡಿದೆ ಸಹ. ಆದರೆ ನಾನು ಉತ್ತಮ ವಾತಾವರಣಕ್ಕೆ ಹೆಚ್ಚು ಒತ್ತು ನೀಡುತ್ತೇನೆ. ನೈತಿಕತೆ, ಮೌಲ್ಯಗಳು ಹಾಗೂ ಶಿಸ್ತಿನ ವಿಷಯಕ್ಕೆ ಬಂದರೆ ದಕ್ಷಿಣ ಚಿತ್ರರಂಗದಲ್ಲಿ ಇವು ಹೆಚ್ಚಿವೆ. ಈ ಅಂಶಗಳ ಕೊರತೆ ಇದೆ. ಬಾಲಿವುಡ್‌ನಲ್ಲಿ ಸೌತ್‌ನಷ್ಟು ಶಿಸ್ತಿಲ್ಲ ಎಂದು ಮಾತನಾಡಿದ್ದಾರೆ.