ಶಾರುಖ್ ಫ್ಯಾನ್ಸ್ ಕಂಡರೆ ಭಯ: ಸ್ಫೋಟಕ ಹೇಳಿಕೆ ನೀಡಿದ ಬಾಲಿವುಡ್ ನಿರ್ದೇಶಕ

Public TV
1 Min Read
sharukh khan

ಬಾಲಿವುಡ್‌ನ ‘ಪಠಾಣ್’ (Paathan) ಸ್ಟಾರ್ ಶಾರುಖ್ ಖಾನ್ (Sharukh Khan) ಜೊತೆ ಕೆಲಸ ಮಾಡಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಇದೀಗ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಶಾರುಖ್ ಜೊತೆ ಸಿನಿಮಾ ಮಾಡಲ್ಲ, ಅವರ ಫ್ಯಾನ್ಸ್ ಕಂಡರೆ ಭಯ ಎಂದು ನಿರ್ದೇಶಕ ಅನುರಾಗ್ ಮಾತನಾಡಿದ್ದಾರೆ.

anurag kashyap 2

ಶಾರುಖ್ ನಟಿಸಿರುವ ‘ಚಕ್ ದೇ ಇಂಡಿಯಾ’ ಚಿತ್ರ ಸೇರಿದಂತೆ ಹಲವು ಚಿತ್ರಗಳು ನನಗೆ ಇಷ್ಟ. ಇಂದು ಸಕ್ಸಸ್‌ಫುಲ್ ನಟನಾಗಿರುವ ಶಾರುಖ್ ಜೊತೆ ಕೆಲಸ ಮಾಡುವುದು ಕಷ್ಟ. ಒಬ್ಬ ನಿರ್ದೇಶಕನಾಗಿ ಶಾರುಖ್ ಅಂದರೆ ಇಷ್ಟ. ಆದರೆ ಅವರ ಅಭಿಮಾನಿಗಳನ್ನು ಕಂಡರೆ ಭಯ ಇದೆ ಎಂದಿದ್ದಾರೆ ಅನುರಾಗ್. ಇದನ್ನೂ ಓದಿ:ಬಿಟೌನ್ ಟಾಕ್: ನಟಿ ಮಲೈಕಾ ಅರೋರಾ- ಅರ್ಜುನ್‍ ಕಪೂರ್ ಬ್ರೇಕಪ್

sharukh khan 3

ದೊಡ್ಡ ಸ್ಟಾರ್‌ಗಳ ಜೊತೆ ಕೆಲಸ ಮಾಡುವಾಗ ಮುನ್ನಚರಿಕೆ ವಹಿಸಬೇಕು. ಒಂದು ವೇಳೆ, ಆ ಸಿನಿಮಾ ಸೋತರೆ ಅವರ ಅಭಿಮಾನಿಗಳಿಂದ ಬೈಗಳ ಎದುರಿಸಬೇಕಾಗುತ್ತದೆ. ಫ್ಯಾನ್ಸ್ ಕೂಡ ನೆಚ್ಚಿನ ನಟರ ಕಡೆಯಿಂದ ಒಂದೇ ರೀತಿಯ ಪಾತ್ರಗಳನ್ನು ಬಯಸುತ್ತಾರೆ. ಜೊತೆಗೆ ನಟರು ಕೂಡ ವಿಭಿನ್ನ ಕಥೆ ಮತ್ತು ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಆದರೆ ಅವರು ಹೊಸ ಕಥೆ ಪ್ರಯೋಗ ಮಾಡಲು ಹೆದರುತ್ತಾರೆ ಎಂದು ಅನುರಾಗ್‌ ಮಾತನಾಡಿದ್ದಾರೆ. ಇಂದು ಸ್ಟಾರ್ ಹೀರೋ ಜೊತೆ ಕೆಲಸ ಮಾಡುವುದು ದುಬಾರಿ ಆಗಬಹುದು. ಆದರೆ ಶಾರುಖ್ ಅಥವಾ ಬೇರೆ ಸ್ಟಾರ್ ಜೊತೆ ಸಿನಿಮಾ ಮಾಡುವ ಸಾಮಾರ್ಥ್ಯ ನನಗಿಲ್ಲ ಎಂದು ಓಪನ್ ಆಗಿ ಅನುರಾಗ್ ಕಶ್ಯಪ್ ಮಾತನಾಡಿದ್ದಾರೆ.

ಅಂದಹಾಗೆ, ಅನುರಾಗ್ ಕಶ್ಯಪ್ ನಟ ಕಮ್ ನಿರ್ದೇಶಕ, ನಿರ್ಮಾಪಕನಾಗಿ ಬಾಲಿವುಡ್‌ನಲ್ಲಿ ಗುರುತಿಸಿಕೊಂಡವರು. ನಟನೆಯ ಜೊತೆ ಡೈರೆಕ್ಟರ್ ಆಗಿ ಕೂಡ ಸೈ ಎನಿಸಿಕೊಂಡಿದ್ದಾರೆ.

Share This Article