‘ಅನಿಮಲ್’ (Animal) ಚಿತ್ರದ ಮೂಲಕ ಜನಪ್ರಿಯತೆ ಗಳಿಸಿರುವ ತೃಪ್ತಿ ದಿಮ್ರಿಗೆ (Tripti Dimri) ಬಾಲಿವುಡ್‌ನಲ್ಲಿ ಭಾರೀ ಅವಕಾಶಗಳು ಹರಿದು ಬರುತ್ತಿವೆ. ರಣ್‌ಬೀರ್ (Ranbir Kapoor) ಜೊತೆ ಬೋಲ್ಡ್ ಆಗಿ ಕಾಣಿಸಿಕೊಂಡ ಮೇಲೆ ತೃಪ್ತಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಇದರ ನಡುವೆ ಬಾಯ್‌ಫ್ರೆಂಡ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ನಟಿ ವಿಶ್ ಮಾಡಿದ್ದಾರೆ.
Advertisement
ನಟಿ ತೃಪ್ತಿ ಎಂಗೇಜ್ ಆಗಿದ್ದಾರೆ. ಹೋಟೆಲ್ ಉದ್ಯಮಿ ಸ್ಯಾಮ್ ಮರ್ಚೆಂಟ್ (Sam Merchant) ಜೊತೆ ಹಲವು ವರ್ಷಗಳಿಂದ ಸ್ನೇಹ ಹೊಂದಿದ್ದಾರೆ. ಇತ್ತೀಚೆಗೆ ಗೆಳೆಯ ಸ್ಯಾಮ್ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿಶೇಷವಾಗಿ ಶುಭಕೋರಿದ್ದಾರೆ.
Advertisement
Advertisement
ಕಳೆದ ವರ್ಷ ಆಪ್ತರ ಮದುವೆಯಲ್ಲಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಆದರೆ ಇಬ್ಬರು ಡೇಟಿಂಗ್ ಮಾಡುತ್ತಿರೋದರ ಬಗ್ಗೆ ಎಲ್ಲೂ ಅಧಿಕೃತವಾಗಿ ಹೇಳಿಕೊಂಡಿಲ್ಲ. ಇದಕ್ಕೂ ಮುನ್ನ ಅನುಷ್ಕಾ ಶರ್ಮಾ (Anushka Sharma) ಸಹೋದರ ಕರ್ಣೇಶ್ ಶರ್ಮಾ ಜೊತೆ ನಟಿ ಡೇಟಿಂಗ್ ಮಾಡುತ್ತಿದ್ದರು. ಕೆಲ ಮನಸ್ತಾಪಗಳಿಂದ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದರು.
Advertisement
‘ಅನಿಮಲ್’ (Animal) ಸಕ್ಸಸ್ ನಂತರ ತೃಪ್ತಿಗೆ ಬಾಲಿವುಡ್ ಸಿನಿಮಾಗಳ ಜೊತೆಗೆ ತೆಲುಗಿನಲ್ಲಿಯೂ ಅವಕಾಶಗಳು ಹರಿದುಬರುತ್ತಿದೆ.