ಮುಂಬೈ: ಬಾಲಿವುಡ್ ಚೆಲುವೆ ಸನ್ನಿ ಲಿಯೋನ್ ತಮ್ಮ ಅವಳಿ ಮಕ್ಕಳಿಬ್ಬರ ಹುಟ್ಟುಹಬ್ಬವನ್ನ ಆಚರಿಸಿದ್ದಾರೆ.
ಹುಟ್ಟುಹಬ್ಬದ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸನ್ನಿ ಲಿಯೋನ್ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟಿಯ ಕಂದಮ್ಮಗಳಿಗೆ ಬರ್ತ್ ಡೇ ವಿಶ್ ಮಾಡುತ್ತಿದ್ದಾರೆ. ಇಬ್ಬರು ಮಕ್ಕಳಿಗೂ ಎರಡನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು. ನನ್ನ ಜೀವನದ ಪ್ರತಿಯೊಂದು ದಿನವನ್ನು ಸಂತೋಷವನ್ನಾಗಿ ಮಾಡಿದ್ದೀರಿ. ಪ್ರತಿ ಬಾರಿ ನೀವು ನಕ್ಕು ಕುಣಿದಾಡಿದಾಗ, ಡ್ಯಾನ್ಸ್, ಹಾಡು, ನನ್ನನ್ನು ಅಮ್ಮಾ ಎಂದು ಕರೆದಾಗ ಹೃದಯ ಕರಗಿದಂತ ಅನುಭವವಾಗುತ್ತದೆ. ನನ್ನ ಮಕ್ಕಳ ಮೇಲೆ ದೇವರ ಆಶೀರ್ವಾದ ಇರಲಿ ಎಂದು ಸದಾ ಪ್ರಾರ್ಥಿಸುತ್ತೇನೆ ಎಂದು ಸನ್ನಿಲೊಯೋನ್ ಭಾವನಾತ್ಮಕ ಸಾಲುಗಳನ್ನು ಬರೆದುಕೊಂಡಿದ್ದಾರೆ.
Advertisement
Happy 2nd Birthday to my baby boys!
You both bring so much joy and happiness to my world every single day. Every time you smile, laugh , play, jump, dance, sing and say mama, my heart melts every time! God Bless you both my little angels from God! pic.twitter.com/DgEO1ySx3u
— Sunny Leone (@SunnyLeone) February 12, 2020
Advertisement
ಭಾವನಾತ್ಮಕ ಸಾಲುಗಳ ಜೊತೆಗೆ ಹುಟ್ಟುಹಬ್ಬ ಆಚರಿಸಿರುವ ಫ್ಯಾಮಿಲಿ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಫೋಟೋದಲ್ಲಿ ಪತಿ ಡೇನಿಯಲ್ ವೇಬರ್, ಅವಳಿ ಮಕ್ಕಳಾದ ನೋವಾ ಮತ್ತು ಆಶರ್ ಹಾಗೂ ಮಗಳು ನಿಶಾ ಇರೋದನ್ನು ಕಾಣಿಬಹುದಾಗಿದೆ.
Advertisement