ಟಾಲಿವುಡ್ (Tollywood) ನಟ ಮಹೇಶ್ ಬಾಬು (Mahesh Babu) ಇದೀಗ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಜೊತೆಗಿನ ತಮ್ಮ 28ನೇ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ದಿನದಿಂದ ದಿನಕ್ಕೆ ಚಿತ್ರತಂಡ ಪಾತ್ರವರ್ಗ ಹಿರಿದಾಗುತ್ತಿದೆ. ಈಗ ಮಹೇಶ್ ಬಾಬು ಚಿತ್ರಕ್ಕೆ ಬಾಲಿವುಡ್ ಖ್ಯಾತ ನಟಿ ರೇಖಾ ಆಗಮನವಾಗಿದೆ.
`ಸರ್ಕಾರು ವಾರಿ ಪಾಟ’ ಚಿತ್ರದ ಗೆಲುವಿನ ನಂತರ ನಿರ್ದೇಶಕ ತ್ರಿವಿಕ್ರಮ್ ಜೊತೆ ಪ್ರಿನ್ಸ್ ಮಹೇಶ್ ಬಾಬು ಕೈಜೋಡಿಸಿದ್ದಾರೆ. ಹೊಸ ಬಗೆಯ ಪಾತ್ರದಲ್ಲಿ ಬರಲು ನಟ ರೆಡಿಯಾಗಿದ್ದಾರೆ. ಸದ್ಯ ಮಹೇಶ್ ಬಾಬು ಚಿತ್ರಕ್ಕೆ ಸಾಥ್ ನೀಡಲು ನಟಿ ರೇಖಾ ಎಂಟ್ರಿಯಾಗಿದೆ.
ಚಿತ್ರದಲ್ಲಿ ಬಹುಮುಖ್ಯ ಪಾತ್ರದಲ್ಲಿ ನಟಿ ರೇಖಾ ನಟಿಸುತ್ತಿದ್ದಾರೆ. ರೇಖಾ ಪಾತ್ರ ಈ ಸಿನಿಮಾದಲ್ಲಿ ಮೇಜರ್ ರೋಲ್ ಪ್ಲೇ ಮಾಡ್ತಿದ್ದು, ಕಥೆ ಕೇಳ್ತಿದ್ದಂತೆ ಖುಷಿಯಿಂದ ಸೌತ್ ಸಿನಿಮಾದಲ್ಲಿ ನಟಿಸಲು ನಟಿ ಓಕೆ ಎಂದಿದ್ದಾರೆ. ಇದನ್ನೂ ಓದಿ: `ಶಾಕುಂತಲಂ’ ರಿಲೀಸ್‌ಗೂ ಮುನ್ನವೇ ಮತ್ತೊಂದು ಮಹಿಳಾ ಪ್ರಧಾನ ಚಿತ್ರದಲ್ಲಿ ಸಮಂತಾ
ಇನ್ನೂ ಮಹೇಶ್ ಬಾಬು ನಾಯಕಿಯರಾಗಿ ಕರಾವಳಿ ಬ್ಯೂಟಿ ಪೂಜಾ ಹೆಗ್ಡೆ ಮತ್ತು `ಗಾಳಿಪಟ 2′ ನಾಯಕಿ ಸಂಯುಕ್ತಾ ಮೆನನ್ ಕಾಣಿಸಿಕೊಳ್ಳಲಿದ್ದಾರೆ. ಎಸ್. ರಾಧಾಕೃಷ್ಣ ಈ ಚಿತ್ರವನ್ನ ಅದ್ದೂರಿಯಾಗಿ ನಿರ್ಮಾಣ ಮಾಡ್ತಿದ್ದಾರೆ.