ಬಾಲಿವುಡ್ (Bollywood) ಬೆಡಗಿ ಕಿಯಾರಾ ಅಡ್ವಾಣಿ (Kiara Advani) ಮದುವೆಯ ಬಳಿಕ ಮತ್ತಷ್ಟು ಹಾಟ್ ಆಗಿದ್ದಾರೆ. ಇದೀಗ ಸಮಾರಂಭವೊಂದರಲ್ಲಿ ಕೆಂಪು ಗುಲಾಬಿ ಅವತಾರ ತಾಳಿದ್ದಾರೆ. ಈ ನಟಿಯ ಹಾಟ್ ಲುಕ್ ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಇದನ್ನೂ ಓದಿ:ಕಿಚ್ಚ ಸುದೀಪ್‌ಗೆ ಬೆದರಿಕೆ ಪತ್ರ ಪ್ರಕರಣದಲ್ಲಿ ಹೊಸ ತಿರುವು
ಹಾಟ್ ಬ್ಯೂಟಿ ಕಿಯಾರಾ ಅಡ್ವಾಣಿ ಇತ್ತೀಚಿಗಷ್ಟೇ ಬಹುಕಾಲದ ಗೆಳೆಯ ಸಿದ್ಧಾರ್ಥ್ ಮಲ್ಹೋತ್ರಾ (Siddarth Malhotra) ಜೊತೆ ಹಸೆಮಣೆ ಏರಿದ್ದರು. ಹನಿಮೂನ್ ಮುಗಿಸಿ ಬಂದಿರುವ ಕಿಯಾರಾ ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದಾರೆ. ಮದುವೆ (Wedding) ನಂತರ ಮತ್ತಷ್ಟು ಹಾಟ್ ಆಗಿದ್ದಾರೆ. ಸೌತ್- ಬಾಲಿವುಡ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.
View this post on Instagram
ಕಾರ್ತಿಕ್ ಆರ್ಯನ್ ‘ಸತ್ಯಪ್ರೇಮ್ ಕೀ ಕಥಾ’, ರಾಮ್ ಚರಣ್ ನಟನೆಯ ‘ಗೇಮ್ ಚೇಂಜರ್’, ಸೇರಿದಂತೆ ಕರಣ್ ಜೋಹರ್ ನಿರ್ಮಾಣದ 3 ಚಿತ್ರಗಳಿಗೆ ಕಿಯಾರಾ ನಾಯಕಿಯಾಗಿ ಫೈನಲ್ ಆಗಿದ್ದಾರೆ.
ಅಂದಹಾಗೆ ಕಿಯಾರಾ (Kiara) ಇತ್ತೀಚಿನ ಫೋಟೋಶೂಟ್ ಪಡ್ಡೆಹುಡುಗರ ಗಮನ ಸೆಳೆದಿದೆ. ಕೆಂಪು ಬಣ್ಣದ ಉಡುಗೆಯಲ್ಲಿ ನಟಿ ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ.